ಚಿರತೆ ದಾಳಿಗೆ ಹಸು, ಕರು ಬಲಿ

ಕೋಲಾರ: ಚಿರತೆಯೊಂದು ದಾಳಿ ನಡೆಸಿ ಹಸು ಮತ್ತು ಕರುವನ್ನು ತಿಂದಿರುವ ಘಟನೆ ಇಂದು ಬೆಳಗ್ಗೆ ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿರುವ ಅಂತರಗಂಗಾ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ನಡೆದಿದೆ.

ವಸತಿ ಶಾಲೆಯ ಆವರಣದಲ್ಲಿ ಹಸುಗಳನ್ನು ಕಟ್ಟಿಹಾಕಲಾಗಿತ್ತು. ಈ ವೇಳೆ ಚಿರತೆ ದಾಳಿ ನಡೆಸಿ ಹಸು, ಮತ್ತು ಕರುವನ್ನು ತಿಂದು ಹಾಕಿದೆ. ಅಂತರಗಂಗೆ ಬೆಟ್ಟದಿಂದ ಚಿರತೆ ಬಂದು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ. 60ಕ್ಕೂ ಹೆಚ್ಚು ಮಕ್ಕಳು ವಸತಿ ಶಾಲೆಯಲ್ಲಿದ್ದಾರೆ. ಚಿರತೆ ದಾಳಿಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv