ಬಂಡೀಪುರದಲ್ಲಿ ಮುಂದುವರಿದ ಪ್ರಾಣಿಗಳ ಸಾವಿನ ಸರಣಿ!

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರೆದಿದೆ. ಇಂದು ಮತ್ತೆ ಗುಂಡ್ಲುಪೇಟೆ ತಾಲೂಕಿನ‌ ಮಂಚಹಳ್ಳಿ ಗುಡ್ಡದ ಬಳಿ 6 ತಿಂಗಳ ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ.

ಕಳೆದ ಒಂದು ತಿಂಗಳಿನಲ್ಲೇ ಬಂಡೀಪುರ ವ್ಯಾಪ್ತಿಯಲ್ಲಿ ನಾಲ್ಕು ಆನೆ, ನಾಲ್ಕು ಹುಲಿಗಳು ಸಾವನ್ನಪ್ಪಿವೆ. ಇದೀಗ ಮತ್ತೆ ಚಿರತೆಯೊಂದು ಸಾವನ್ನಪ್ಪಿರುವುದು ಕಳವಳ ಮೂಡಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ರವಿಕುಮಾರ್, ಆರ್‌ಎಫ್‌ಓ ನವೀನ್‌ ಕುಮಾರ್, ಎನ್‌ಟಿಸಿಎ ಸದಸ್ಯ ರಘುರಾಂ ಪರಿಶೀಲನೆ ನಡೆಸಿದರು. ಕಾಡು ಹಂದಿಜೊತೆಗಿನ ಕಾಳಗದಲ್ಲಿ ಈ ಮರಿ ಚಿರತೆ ಮೃತ ಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಅರಣ್ಯ ಇಲಾಖೆಯ ಪಶುವೈದ್ಯ ಡಾ ನಾಗರಾಜು, ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬಳಿಕ ಕಳೇಬರವನ್ನು ಸುಟ್ಟು ಹಾಕಲಾಗಿದೆ.

Leave a Reply

Your email address will not be published. Required fields are marked *