ಊರಿಗೆ ನುಗ್ಗಿದ ಚಿರತೆಗೆ 9 ಮೇಕೆಗಳು ಬಲಿ

ನೆಲಮಂಗಲ: ಮೇಯಲು ಬಿಟ್ಟಿದ್ದ ಮೇಕೆಗಳ ಮೇಲೆ ಚಿರತೆ ದಾಳಿಮಾಡಿ 9 ಮೇಕೆಗಳನ್ನು ಕೊಂದಿರುವ ಘಟನೆ ನೆಲಮಂಗಲದ ಕುಲುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತ್ತಿರುವ ಮೇಕೆಗಳು ಗ್ರಾಮದ ಮಹಿಮಣ್ಣ ಅನ್ನೋರಿಗೆ ಸೇರಿದ್ದು, ಗುಂಪಿನಲ್ಲಿದ್ದ ಇನ್ನೂ ಹಲವು ಮೇಕೆಗಳನ್ನು ಚಿರತೆ ಗಾಯಗೊಳಿಸಿದೆ. ರೈತ ಮಹಿಮಣ್ಣನಿಗೆ ಮೇಕೆಗಳೇ ಜೀವನಾಧಾರವಾಗಿದ್ದವು. ಅವೇ ಈಗ ಚಿರತೆ ದಾಳಿಗೆ ತುತ್ತಾಗಿರೋದು ರೈತನನ್ನು ಕಂಗಾಲು ಮಾಡಿದೆ.

ಗ್ರಾಮದ ಪಟಾಲಮ್ಮ ದೇವಸ್ಥಾನದ ಎಸ್ಟೇಟ್​ ಕಾಂಪೌಂಡ್ ​​​ಬಳಿ ಮಹಿಮಣ್ಣ ಮೇಕೆಗಳನ್ನು ಮೇಯಲು ಬಿಟ್ಟು ಹೋಗಿದ್ದರು. ಈ ಸಂಧರ್ಭದಲ್ಲಿ ಚಿರತೆ ಮೇಕೆಗಳ ಮೇಲೆ ದಾಳಿಮಾಡಿದೆ. ಮೇಕೆಗಳ ಅರಚಾಟ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರನ್ನ ನೋಡಿ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಾಲ್ಲೂಕಿನ ಅಲಕೂರು-ತಿಮ್ಮಸಂದ್ರ ಗ್ರಾಮಗಳ ವ್ಯಾಪ್ತಿಯ ಅರಣ್ಯದಿಂದ ಚಿರತೆ ಬಂದಿರಬಹುದು ಅಂತ ಶಂಕೆ ವ್ಯಕ್ತಪಡಿಸಲಾಗಿದೆ.

Leave a Reply

Your email address will not be published. Required fields are marked *