ಫಾರಂಗೆ ನುಗ್ಗಿ 150 ಕೋಳಿ ಸ್ವಾಹ ಮಾಡಿದ ಚಿರತೆ..!

ತುಮಕೂರು: ಕಾಡಿನಿಂದ ಹಸಿದ ಚಿರತೆಯೊಂದು ಕೋಳಿ ಫಾರಂಗೆ ನುಗ್ಗಿದ ಘಟನೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆದಿದೆ.
ಕಾಡು ಬಿಟ್ಟು ನಾಡಿಗೆ ಬಂದಿರುವ ಚಿರತೆ ಕೋಳಿ ಫಾರಂಗೆ ನುಗ್ಗಿ ಅಲ್ಲಿದ್ದ 150ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ಹಾಕಿದೆ. ಕೋಳಿ ಫಾರಂಗೆ ನುಗ್ಗಿದ ಚಿರತೆಯನ್ನು ಗ್ರಾಮಸ್ಥರು ಕೂಡಿ ಹಾಕಿದ್ದಾರೆ. ಚಿರತೆ ನುಗ್ಗಿದ ಕೋಳಿ ಫಾರಂ ಅನ್ನು ತುಂಬಾಡಿ ಗ್ರಾಮದ ಮಾರುತಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ.

ಚಿರತೆ ಸೆರೆ ಹಿಡಿಯಲು ಅರವಳಿಕೆ ತಂಡ ಕಾರ್ಯಾಚರಣೆ

ಕೋಳಿ ಫಾರಂಗೆ ನುಗ್ಗಿದ ಚಿರತೆಯನ್ನು ಸೆರೆ ಹಿಡಿಯಲು ಹಾಸನದಿಂದ ಅರವಳಿಕೆ ತಜ್ಞರು ತುಂಬಾಡಿಗೆ ಆಗಮಿಸಿದ್ದಾರೆ. ಡಾ. ಮುರುಳಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭಗೊಂಡಿದೆ. ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದೆ. ಅರವಳಿಕೆ ತಜ್ಞರಿಗೆ ಅರಣ್ಯ ಇಲಾಖೆ, ಪೊಲೀಸ್​ ಸಿಬ್ಬಂದಿ ಸಾಥ್​ ನೀಡಿದ್ದಾರೆ. ಚಿರತೆಯನ್ನು ಸೆರೆ ಹಿಡಿಯುವುದು ನೋಡಲು ಗ್ರಾಮಸ್ಥರು ಜಮಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv