ಚಿರತೆ ಹಿಂಡನ್ನು ಕಂಡು ಗ್ರಾಮಸ್ಥರು ಆತಂಕ..!

ದಾವಣಗೆರೆ: ಹೊನ್ನಾಳಿ ತಾಲೂಕಿನ ಯರಲಬನ್ನಿಕೋಡು ಗ್ರಾಮದಲ್ಲಿ ಚಿರತೆ ಹಿಂಡು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೊಲಂಬಿ- ಹೊನ್ನಾಳಿ ಮಾರ್ಗದಲ್ಲಿ 2 ಚಿರತೆ ಜೊತೆಗೆ 2 ಚಿರತೆ ಮರಿಗಳು ಮೂರುದಿನಗಳಿಂದ ಪ್ರತ್ಯಕ್ಷವಾಗುತ್ತಿವೆ ಎನ್ನಲಾಗಿದೆ. ಚಿರತೆಗಳು ಭತ್ತದ ಗದ್ದೆಗಳಲ್ಲಿ ನುಗ್ಗಿವೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಾಯಿ ಸಮೇತ ಬೋನು ಇಟ್ಟಿದ್ದಾರೆ. ಚಿರತೆಯನ್ನು ಕಂಡು ಯರಲಬನ್ನಿಕೋಡು ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಲು ಬಲೆ ಬೀಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv