ವಿಧಾನ ಪರಿಷತ್​ ಕಲಾಪ: ಉಚಿತ ಬಸ್​ ಪಾಸ್​ ಚರ್ಚೆ

ಬೆಂಗಳೂರು: ಇಂದಿನ ವಿಧಾನ ಪರಿಷತ್​ ಕಲಾಪದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ನೀಡುವ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷ ಶಾಸಕರಿಗೆ ಉತ್ತರಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸರ್ಕಾರ ಶೇ 100ರಷ್ಟು ಅಥವಾ ಕನಿಷ್ಠ ಶೇ 75ರಷ್ಟು ಅನುದಾನ ನೀಡಿದ್ರೆ ಮಾತ್ರ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಲು ಸಾಧ್ಯ ಎಂದು ಸ್ಪಷ್ಟನೆ ನೀಡಿದರು. ಸಾರಿಗೆ ಸಂಸ್ಥೆಗಳು ₹ 600 ಕೋಟಿ ನಷ್ಟದಲ್ಲಿವೆ. ಹಿಂದೆ ಸರ್ಕಾರ ಕೊಡುತ್ತಿದ್ದ ಶೇ 50ರಷ್ಟು ಪಾಲಿನ‌ ಅನುದಾನದ ಐದು ವರ್ಷದ ಬಾಕಿ ₹ 500 ಕೋಟಿಯೇ ಇನ್ನೂ ಬಂದಿಲ್ಲ. ಇದನ್ನು ಯಾರು ಕೊಡುತ್ತಾರೆ? ನೀವು ಕೊಡುತ್ತೀರಾ? ಎಂದು ಪ್ರತಿಪಕ್ಷ ಶಾಸಕರನ್ನು ಸಚಿವ ಡಿ.ಸಿ.ತಮ್ಮಣ್ಣ ಪ್ರಶ್ನಿಸಿದರು. ಸಚಿವರ ಹೇಳಿಕೆಯಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಷ್ಟರಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆಗೆ ಅವಕಾಶವಿಲ್ಲವೆಂದು ಹೇಳಿ ಸದನವನ್ನು ಸರಿದಾರಿಗೆ ತಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv