ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ: ಜೆಡಿಎಸ್ ತಿಪ್ಪೇಸ್ವಾಮಿಗೆ ಅವಕಾಶ

ಬೆಂಗಳೂರು: ಖಾಲಿ ಇರುವ ಜೆಡಿಎಸ್​ ಪಾಲಿನ ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬದ ಆಪ್ತ ತಿಪ್ಪೇಸ್ವಾಮಿ ಎಂಬುವರ ಹೆಸರನ್ನ ನಾಮನಿರ್ದೇಶನ ಮಾಡಿ ಸಿಎಂ ಕುಮಾರಸ್ವಾಮಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ. ಕುರುಬ ಸಮುದಾಯದ ಹಾಸನ ಮೂಲದವರಾದ ತಿಪ್ಪೇಸ್ವಾಮಿ ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಸದ್ಯ ಲೋಕೊಪಯೋಗಿ ಸಚಿವ ರೇವಣ್ಣರ ಕಚೇರಿಯ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಜಿ ಶಾಸಕರಾದ ಕೋನರೆಡ್ಡಿ ಹಾಗೂ ರಮೇಶ್ ಬಾಬು ಈ ಸ್ಥಾನದ ಆಕಾಂಕ್ಷಿಗಳಾದ್ದರು. ಆದರೆ ಅಚ್ಚರಿ ಎಂಬಂತೆ ಇವರಿಬ್ಬರ ಬದಲಿಗೆ ತಿಪ್ಪೇಸ್ವಾಮಿಗೆ ಅವಕಾಶ ನೀಡಲಾಗಿದೆ.