‘ಮೈತ್ರಿ ಸರ್ಕಾರದ ಗೊಂದಲ ವಿಧಾನ ಪರಿಷತ್‌ಗೂ ಬಂದಿದೆ’

ಬೆಂಗಳೂರು: ಮೈತ್ರಿ ಸರ್ಕಾರದ ಗೊಂದಲ ವಿಧಾನ ಪರಿಷತ್‌ಗೂ ಬಂದಿದೆ ಅಂತ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಇಂದು ಹೇಳಿದ್ದಾರೆ. ಸದನದ ಹೊರಗೆ ಮಾತನಾಡುತ್ತಿದ್ದ ಅವರು, ಹಂಗಾಮಿ ಸಭಾಪತಿ ಅಧಿಕಾರದ ವ್ಯಾಪ್ತಿ ಬಗ್ಗೆ ಮೊದಲೇ ಚರ್ಚೆ ಮಾಡಿದ್ದೆವು. ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಅಂತ ಕೇಳಿದ್ದೆವು. ಆದರೆ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ, ಅದೇ ಕಾರಣಕ್ಕೆ ಇಂದು ಸಭಾತ್ಯಾಗ ಮಾಡಿದ್ದೇವೆ ಅಂತಾ ತಿಳಿಸಿದ್ರು.

ಅಲ್ಲದೇ, ಪ್ರಮಾಣ ವಚನ ಸ್ವೀಕಾರಕ್ಕೆ ಮಾತ್ರ ಅಧಿಕಾರ ಸೀಮಿತವಾಗಬೇಕಾ? ಎಂಬ ಬಗ್ಗೆ ಚರ್ಚೆ ನಡೆದಿತ್ತು. ಮೇಲ್ಮನೆ ಮತ್ತು ಸಭಾಪತಿ ಪೀಠದ ಗೌರವ ಹೆಚ್ಚಿಸುವ ಸಲುವಾಗಿ ಸರ್ಕಾರ ನಮ್ಮಲ್ಲಿ ವಿನಂತಿ ಮಾಡಿತ್ತು. ಆದರೆ ಸಚಿವ ಕೃಷ್ಣಭೈರೇಗೌಡ, ನಾವು ಆ ರೀತಿ ಹೇಳೇ ಇಲ್ಲ ಅಂತ ವಾದ ಮಾಡಿದ್ದಾರೆ. ಪೀಠಕ್ಕೆ ಗೌರವ ಕೊಟ್ಟು ಸಂವಿಧಾನಾತ್ಮಕವಾಗಿ ಚುನಾವಣೆ ನಡೆಸಬೇಕು ಅಂತ ಕೇಳಿದ್ದೇವೆ. ಆದರೆ ಸದನವನ್ನ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಆಯ್ಕೆಯಾಗದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv