ವೇತನ ಕೊಡುವವರೆಗೂ ಧರಣಿ ಕೈಬಿಡೋಲ್ಲ, ಉಪನ್ಯಾಸಕರ ಕುಟುಂಬ ಪಟ್ಟು

ಬಾಗಲಕೋಟೆ: 8 ವರ್ಷದಿಂದ ವೇತನ ಕೊಡದ ಹಿನ್ನೆಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರ ಕುಟುಂಬ ಐಟಿಐ ಕಾಲೇಜು ಅಧ್ಯಕ್ಷರ ಮನೆ ಮುಂದೆ ಧರಣಿ ನಡೆಸಿದ ಘಟನೆ ನಗರದ ವಿನಾಯಕನಗರದಲ್ಲಿ ನಡೆದಿದೆ.

30 ಲಕ್ಷ ವೇತನ ಬಾಕಿ
ತುಕಾರಾಂ ಪ್ರಭುಕರ್ ಧರಣಿ ಕುಳಿತ ಉಪನ್ಯಾಸಕ. ನಗರದಲ್ಲಿರುವ ಅಲ್‌ ಮಿಜಾನ್ ಐಟಿಐ ಕಾಲೇಜಿನಲ್ಲಿ ತುಕಾರಾಂ ಪ್ರಭುಕರ್​ ಉಪನ್ಯಾಸಕರಾಗಿದ್ದರು. ಕಾಲೇಜಿನ ಅಧ್ಯಕ್ಷ ಜಿ.ಎ. ಡಾಲಾಯತ್ ಎಂಬುವರು ಸರಿಯಾಗಿ ವೇತನ ನೀಡದೇ ಇದ್ದಿದ್ದಕ್ಕೆ ಅವರ ಮನೆ ಮುಂದೆ ಧರಣಿ ನಡೆಸಿದ್ದಾರೆ. ಉಪನ್ಯಾಸಕ ತುಕಾರಾಂ ತಮ್ಮ ಪತ್ನಿ, ಮಕ್ಕಳ ಸಮೇತ ಧರಣಿ ಕುಳಿತಿದ್ದಾರೆ. ವೇತನ ಕೊಡುವವರೆಗೂ ಧರಣಿ ಕೈಬಿಡೋದಿಲ್ಲ ಎಂದು ಸ್ಥಳದಲ್ಲಿ ಪಟ್ಟು ಹಿಡಿದಿದ್ದಾರೆ. ತುಕಾರಾಂ​ ಅವರು 22 ವರ್ಷಗಳಿಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಎಂಟು ವರ್ಷದಿಂದ ಬರಬೇಕಿದ್ದ 30 ಲಕ್ಷ ವೇತನ ಬಾಕಿಯಿದ್ದು, ವೇತನ ನೀಡುವಂತೆ ಉಪನ್ಯಾಸಕರ ಕುಟುಂಬದವರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv