ಕಡಲ ಮಂಥನದಲ್ಲಿ ಅಮೃತನೂ ಬರುತ್ತೆ, ವಿಷಾನೂ ಬರುತ್ತೆ-ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಬೆಳಗಾವಿ: ಕಡಲ ಮಂಥನ ಆದಾಗ ಅಮೃತನೂ ಬರುತ್ತೆ.. ವಿಷಾನೂ ಬರುತ್ತೆ.. ಎರಡನ್ನೂ ಸೇವಿಸಲು ತಯಾರಿರಬೇಕು ಅಂತಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ‘ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ನಂತರ ಧೃವೀಕರಣ ಆಗಲಿದೆ’ ಅಂತಾ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಆ ಸಂದರ್ಭ ಇನ್ನೂ ಬಂದಿಲ್ಲ. ಕಡಲ ಮಂಥನ ಆದ್ರೆ ಅಮೃತ ಮತ್ತು ವಿಷ ಎರಡನ್ನೂ ಸೇವಿಸಲು ರೆಡಿ ಇರಬೇಕು ಅನ್ನೋ ಮೂಲಕ ಪರೋಕ್ಷವಾಗಿ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆದರೂ ತಾವು ಸಿದ್ಧರಿದ್ದೇವೆ ಅಂತಾ ಹೇಳಿದ್ದಾರೆ.

ಇನ್ನು, ಕಾಂಗ್ರೆಸ್​ನಿಂದ ಗೋಕಾಕ್​​ಗೆ ಲಖನ್ ಜಾರಕಿಹೊಳಿಯನ್ನ ಉತ್ತರಾಧಿಕಾರಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇಂತಹ ವಿಚಾರಗಳು ಅತೀ ಸೂಕ್ಷ್ಮ. ಈ ಬಗ್ಗೆ ನಮ್ಮ ರಾಜ್ಯನಾಯಕರು ಮತ್ತು ಹೈಕಮಾಂಡ್ ನಾಯಕತ್ವ ನಿರ್ಧಾರ ಮಾಡುತ್ತದೆ. ನಮ್ಮ ಅನಸಿಕೆ ಹೇಳಿಕೆ ಮೇಲೆ ಅವಲಂಬನೆ ಇರಲ್ಲ. ಪಕ್ಷದ ಹೈಕಮಾಂಡ್ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ಸಾಧಕ‌ ಬಾಧಕಗಳ ಬಗ್ಗೆ ವಿಚಾರ ಮಾಡುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷವನ್ನ ಯಾರೂ ರೈಡ್ ಮಾಡೋಕೆ ಆಗಲ್ಲ. ಕಾಂಗ್ರೆಸ್ ಪಕ್ಷವನ್ನ  ಸುಲಭವಾಗಿ ರೈಡ್ ಮಾಡ್ತೇನಿ‌ ಅಂದ್ರೆ ಅದು ಮೂರ್ಖತನದ ಪರಮಾವಧಿ ಎಂದರು. ಈ ಮೂಲಕ ಸತೀಶ್ ಜಾರಕಿಹೊಳಿಗೆ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಅಂತಾ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv