ಮೆರವಣಿಗೆ ವೇಳೆ ಪೊಲೀಸರ ಲಾಠಿ ಪ್ರಹಾರ, ಓರ್ವ ಸಾವು

ಚಿಕ್ಕಬಳ್ಳಾಪುರ: ಕೆಪಿಸಿಸಿ ಆಯೋಜಿಸಿದ್ದ ಚುನಾವಣಾ ಸಭೆಯನ್ನು ಮುಗಿಸಿಕೊಂಡು ಮನೆಗೆ ಹೋಗುವ ವೇಳೆಯಲ್ಲಿ ಪೊಲೀಸರು ಲಾಠಿ ಚಾರ್ಜ್​ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕಾರ್ಯಕರ್ತರು ಸಭೆ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಮೆರವಣಿಗೆ ಮುಖಾಂತರ ಹೋಗಿದ್ದಾರೆ. ಮೆರವಣಿಗೆಗೆ ಅನುಮತಿ ಪಡೆಯದೇ ನಡೆಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದಕ್ಕೆ ಪೊಲೀಸರು ತಡೆದಿದ್ದರು. ಆದ್ರೂ ಕಾರ್ಯಕರ್ತರು ಕೇಳದೇ ಹೋದಾಗ ಲಾಠಿ ಚಾರ್ಜ್​ ಮಾಡಿದ್ದಾರೆ.

ಪೊಲೀಸರ ಲಾಠಿ ಚಾರ್ಜ್​ ವೇಳೆ ವಿನಯ್ ಅನ್ನೋ ಕಾರ್ಯಕರ್ತನಿಗೆ ತೀವ್ರ ಪೆಟ್ಟುಬಿದ್ದು ಕುಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.  ಕಾರ್ಯಕರ್ತರು ಪೊಲೀಸ್​ ಠಾಣೆಯ ಮುಂದೆ ಶವವನ್ನಿಟ್ಟು ಧರಣಿ ನಡೆಸಿದ ಪ್ರಸಂಗವೂ ನಡೆದಿದೆ. ಇದೆಲ್ಲದರ ಪರಿಣಾಮವಾಗಿ ವಿನಾಕಾರಣ ಲಾಠಿ ಚಾರ್ಜ್​ ನಡೆಸಿದ ಇನ್ಸ್​ಪೆಕ್ಟರ್‌ನನ್ನು  ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *