ಬ್ರೇಕಪ್​​​​ಗೂ ಮುನ್ನ ಕೊನೇ ಸಲ ಕಿಸ್​ ಮಾಡ್ಬೇಕು ಅಂತ ಹೇಳಿ ಹೀಗಾ ಮಾಡೋದು…!

ಕೆಲವರು ಬ್ರೇಕಪ್​ಗೂ ಮುನ್ನ ತನ್ನ ಸಂಗಾತಿ ಜೊತೆ ಕೊನೇ ಸಲ ಸಿನಿಮಾ ನೋಡ್ಬೇಕು, ಊಟಕ್ಕೆ ಹೋಗ್ಬೇಕು ಅಥವಾ ಜಸ್ಟ್​ ಮೀಟ್​ ಆಗ್ಬೇಕು ಅಂತ ಕೇಳಬಹುದೇನೋ. ಆದ್ರೆ ಇಲ್ಲೊಬ್ಬಳು ಯುವತಿ ಬ್ರೇಕಪ್​​​ಗೂ ಮುನ್ನ ಕೊನೇ ಬಾರಿ ಕಿಸ್​​ ಮಾಡಬೇಕು ಅಂತ ಹೇಳಿ, ತನ್ನ ಬಾಯ್​​ಫ್ರೆಂಡ್​​ನ ನಾಲಿಗೆ ಕಚ್ಚಿ ಜೀವನದಲ್ಲೇ ಆತ ಅದನ್ನ ಮರೆಯಲಾಗದಂತೆ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು. ಇಂಥದ್ದೊಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. 23 ವರ್ಷದ ಲಿಯೂ, ತನ್ನ ಗರ್ಲ್​ಫ್ರೆಂಡ್​​ ಝೌ ಜೊತೆ ಶಾಪಿಂಗ್​​ ಮಾಲ್​​ಗೆ ಹೋಗಿದ್ದಾನೆ. ಈ ವೇಳೆ ಬ್ರೇಕಪ್​ ಮಾಡಿಕೊಳ್ಳೋಣ ಎಂದು ಹೇಳಿದ್ದಾನೆ. ಇದನ್ನ ಆಕೆ ಸಲೀಸಾಗಿ ಒಪ್ಪಿಕೊಳ್ಳಲು ಅಗಿಲ್ಲ. ಕೆಲಹೊತ್ತು ವಾದ ಮಾಡಿದ ಬಳಿಕ, ಬ್ರೇಕಪ್​​ ಮಾಡಿಕೊಳ್ಳೋದಕ್ಕೂ ಮುನ್ನ ಕೊನೇ ಬಾರಿ ನನಗೆ ಒಂದು ಕಿಸ್​ ಬೇಕು ಎಂದು ಗರ್ಲ್​ಫ್ರೆಂಡ್​ ಕೇಳಿದ್ದಾಳೆ.

ಲಾಸ್ಟ್​​ ಕಿಸ್​ ತಾನೆ ಓಕೆ ಅಂತ ಬಾಯ್​ಫ್ರೆಂಡ್​ ಕೂಡ ಹೇಳಿದ್ದಾನೆ. ಆದ್ರೆ ಆಕೆ ಕಿಸ್​ ಮಾಡಿದ ನಂತರ ಆತ ಕಿರುಚಾಡಲು ಶುರು ಮಾಡಿದ್ದ. ಯುವತಿ ಆತನ ನಾಲಿಗೆಯನ್ನ ಜೋರಾಗಿ ಕಚ್ಚಿದ್ದಳು. ಇದರಿಂದ ಆತ ಜೋರಾಗಿ ಕಿರುಚಾಡುತ್ತಾ ಅತ್ತಿದ್ದಾನೆ. ಬಾಯಿಂದ ರಕ್ತಸ್ರಾವವಾಗುವಂತೆ ಗರ್ಲ್​​ಫ್ರೆಂಡ್​ ಆತನಿಗೆ ಕಚ್ಚಿದ್ದಾಳೆ.

ಕೊನೆಗೆ ಸ್ಥಳದಲ್ಲಿದ್ದವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ಇಬ್ಬರನ್ನೂ ಬಿಡಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಪೊಲೀಸರು ಯುವತಿಯನ್ನು ಎಳೆಯಲು ಮುಂದಾದಂತೆಲ್ಲಾ ಆಕೆ ಇನ್ನೂ ಜೋರಾಗಿ ಕಚ್ಚಿದ್ದಾಳೆ. ಕೊನೆಗೆ ಪೊಲೀಸರು ಪೆಪ್ಪರ್​ ಸ್ಪ್ರೇ ಬಳಸಿದ್ದು, ಯುವತಿ ಪ್ರಜ್ಞೆ ತಪ್ಪಿದ ನಂತರ ಬಾಯ್​ಫ್ರೆಂಡ್​​ನನ್ನು ಬಿಟ್ಟಿದ್ದಾಳೆ. ನಂತರ ಯುವಕನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಇನ್ನು ಪೊಲೀಸ್​ ತನಿಖೆ ವೇಳೆ ಯುವತಿಯ ಪೋಷಕರು ಮಾತನಾಡಿ, ನಮ್ಮ ಮಗಳು ಈ ಹಿಂದೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು. ಇದಕ್ಕೆ 5 ವರ್ಷ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಳು ಎಂದು ತಿಳಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv