ರಾಹುಲ್ ಗಾಂಧಿ ಹತ್ಯೆಗೆ ಯತ್ನ? ಲೇಸರ್​ ಗನ್ ಪಾಯಿಂಟ್ ಮಾಡಿದ್ದಾಗಿ ಕಾಂಗ್ರೆಸ್ ಆರೋಪ..!

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಜೀವಕ್ಕೆ ಅಪಾಯ ಇದೆ ಅಂತಾ ಕಾಂಗ್ರೆಸ್​ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ರಾಹುಲ್ ಗಾಂಧಿಯನ್ನ ಟಾರ್ಗೆಟ್​ ಮಾಡಿ ಲೇಸರ್ ಗನ್​ ಪಾಯಿಂಟ್​ ಇಡಲಾಗಿತ್ತು ಅಂತಾ ಆರೋಪಿಸಿ ಕೇಂದ್ರ ಗೃಹಸಚಿವಾಲಯಕ್ಕೆ ಕಾಂಗ್ರೆಸ್​ ಪತ್ರ ಬರೆದಿದೆ. ಅಮೇಥಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ರಾಹುಲ್​ ಗಾಂಧಿಗೆ ಅಪಾಯ ಇದೆ. ಅಮೇಥಿಯಲ್ಲಿ ನಾಮಿನೇಷನ್​ ಮಾಡುವ ವೇಳೆ ಗ್ರೀನ್​​ ಲೇಸರ್​​ ಪಾಯಿಂಟ್​  7 ಬಾರಿ ಇಡಲಾಗಿತ್ತು ಅಂತಾ ಕಾಂಗ್ರೆಸ್​ ಹೇಳಿದೆ. ಅದು ಬಹುಶಃ ಸ್ನೈಪರ್ ಗನ್ ಆಗಿರಬಹುದು ಅಂತಾ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv