ನಾನು ಆ ವಯಸ್ಸಲ್ಲಿ ಶಾ ನಷ್ಟು ಪವರ್​ಫುಲ್ ಆಗಿ ಆಡ್ತಿರಲಿಲ್ಲ..!

ಇಡೀ ಕ್ರಿಕೆಟ್ ರಂಗವೇ ಬೆಚ್ಚಿಬೀಳುವಂತೆ ಮಾಡಿದ ಪ್ರತಿಭಾನ್ವಿತ ಯುವ ಆಟಗಾರ ಪೃಥ್ವಿ ಶಾ ಜಗತ್ತಿನೆಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ.
ವಿಂಡೀಸ್​ ವಿರುದ್ಧ ಟೆಸ್ಟ್​​ ಸರಣಿಯಲ್ಲಿ ಮ್ಯಾನ್​ ಆಫ್ ದಿ ಮ್ಯಾಚ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ 18ರ ಹರೆಯದ ​ಪೃಥ್ವಿ ಶಾರನ್ನು ಕ್ರಿಕೆಟ್​​​ ಲೋಕದ ದಂತಕಥೆ ಬ್ರಯಾನ್​ ಲಾರಾ ಕೂಡ ಕೊಂಡಾಡಿದ್ದಾರೆ. ನಾನು 18 ವರ್ಷದವನಿದ್ದಾಗ ಶಾನಷ್ಟು ಪವರ್​ಫುಲ್​ ಆಗಿ ಆಡುತ್ತಿರಲಿಲ್ಲ ಎಂದಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ಸರಣಿಯ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಲಾರಾ, ಶಾ ಬಲಗೈ ಆಟಗಾರನಾಗಿರೋದ್ರಿಂದ ಸಚಿನ್​ ತೆಂಡೂಲ್ಕರ್​ ಮತ್ತು ವಿರೇಂದ್ರ ಸೆಹ್ವಾಗ್​​ ಜೊತೆ ಹೋಲಿಸಬಹುದು. ಆದ್ರೆ ನನ್ನ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಪೃಥ್ವಿ ಶಾರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತೇವೆ ಎಂದ ಲಾರಾ, ಅವರು ಕ್ರಿಕೆಟ್​ಗಾಗಿ ಹೆಚ್ಚಿನ ಸಮಯ ಮೀಸಲಿಡಬೇಕು. ಆಗ ಅವರು ಇನ್ನೂ ಚೆನ್ನಾಗಿ ಬೆಳೆಯುತ್ತಾರೆ ಎಂದಿದ್ದಾರೆ.
ಇನ್ನು ಪೃಥ್ವಿ ಶಾ ತನ್ನ ಮೊದಲ ಸರಣಿಯಲ್ಲೇ ಶತಕ ಬಾರಿಸಿದ್ದು ನಿಜಕ್ಕೂ ಅದ್ಭುತವಾಗಿದೆ. ಅವರ ವಯಸ್ಸಿನಲ್ಲಿ ನಾನು ಅವರ ಹತ್ತಿರವೂ ಸುಳಿಯಲಾಗುತ್ತಿರಲಿಲ್ಲ. ಶಾ ಆಟದ ಬಗ್ಗೆ ಮಾತನಾಡಲು ಪದವೇ ಸಿಗುತ್ತಿಲ್ಲ ಎಂದಿರುವ ಲಾರಾ, ಅವರು ಬ್ಯಾಟಿಂಗ್​ಗೆ ಒಗ್ಗಿಕೊಂಡಿರುವ ರೀತಿ ಬಹಳ ವಿಭಿನ್ನವಾಗಿದೆ, ಆತನಲ್ಲಿ ಉತ್ತಮ ಆಟಗಾರರನನ್ನು ನಿರೀಕ್ಷೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಶಾಗೆ ಇನ್ನೂ ಹೆಚ್ಚೆಚ್ಚು ಕಲಿಯಬೇಕೆಂಬ ಹಸಿವಿದೆ ಎಂದಿರುವ ಲಾರಾ, ಆತ ಆಟದಲ್ಲಿ ಉತ್ಸಾಹ ತೋರಿಸಿದಷ್ಟೇ ಅದನ್ನು ಪ್ರೀತಿಸುತ್ತಾನೆ. ಹೀಗಾಗಿ ಆತ, ಆಟವನ್ನು ಕಲಿಯುತ್ತಲೇ ಒಬ್ಬ ಅಸಾಮಾನ್ಯ ಆಟಗಾರನಾಗುತ್ತಾನೆ ಎಂದಿದ್ದಾರೆ.
ಇತ್ತೀಚಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಪೃಥ್ವಿ ಶಾರನ್ನ ಹೊಗಳಿದ್ದರು. ನಾನು 18 ವರ್ಷದವನಾಗಿದ್ದಾಗ ಶಾನ 10%ನಷ್ಟೂ ಟೆಕ್ನಿಕಲ್ ಆಗಿ ಸ್ಟ್ರಾಂಗ್ ಆಗಿರಲಿಲ್ಲ. ಅವರು ಅದ್ಭುತ ಆಟವಾಡುತ್ತಾರೆ ಅಂತ ಕೊಹ್ಲಿ ಶಾರನ್ನ ಕೊಂಡಾಡಿದ್ದರು.

ನಿಮ್ಮ ಯಾವುದೇ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv