ಸರ್ಕಾರ ಅನುಮತಿ ನೀಡಿದ್ರೆ ದೇವರಾಜ ಮಾರುಕಟ್ಟೆಯನ್ನ ಅಭಿವೃದ್ಧಿ ಮಾಡ್ತೀವಿ: ಪ್ರಮೋದಾ ದೇವಿ

ಮೈಸೂರು: ಇಲ್ಲಿನ ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರ್ಕೆಟ್ ನವೀಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಮಾತೆ ಪ್ರಮೋದ ದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಕಟ್ಟಡಗಳನ್ನ ನವೀಕರಣಗೊಳಿಸಲು ಸಾಧ್ಯವಿದೆ. ಸರ್ಕಾರ ನಮ್ಮ‌ ಫೌಂಡೆಷನ್‌ಗೆ ನವೀಕರಣ ಕಾರ್ಯವನ್ನ ಒಪ್ಪಿಸಿದರೆ‌ ಮಾಡಲು ಸಿದ್ಧ. ನಾವು ಈಗಾಗಲೇ ಜಗನ್ಮೋಹನ ಅರಮನೆಯನ್ನ ಪಾರಂಪರಿಕತೆಗೆ ಧಕ್ಕೆಯಾಗದಂತೆ, ಜಿ.ಎನ್.ಹೆರಿಟೇಜ್ ಫೌಂಡೇಷನ್ ಸಹಕಾರದೊಂದಿಗೆ ನವೀಕರಣ ಮಾಡಿದ್ದೇವೆ. ಜುಲೈ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದರು.

ನಗರದಲ್ಲಿ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ಸರ್ಕಾರ ಈವರೆಗೆ ಸಲಹೆಗಳನ್ನ ಅಪೇಕ್ಷಿಸಿರಲಿಲ್ಲ. ಆದರೆ ಸರ್ಕಾರ ಅಪೇಕ್ಷಿಸಿದರೆ ಸಲಹೆ ಕೊಡಲು ನಾವು ಸಿದ್ಧ. ಲ್ಯಾನ್ಸ್ ಡೌನ್ ಬಿಲ್ಡಿಂಗ್ ವಿಚಾರವಾಗಿ ಸರ್ಕಾರ ನಮ್ಮ ಸಲಹೆ ಕೇಳಿಲ್ಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಯಾವ ಕಾರಣಕ್ಕೆ‌ ಅದನ್ನ ಕೆಡವಲು ಮುಂದಾಗಿದ್ದಾರೆ ಗೊತ್ತಿಲ್ಲ. ಈಗಿನ ತಂತ್ರಜ್ಞಾನದಲ್ಲಿ ಏನನ್ನು ಬೇಕಾದರೂ ಮಾಡಬಹುದು. ಪಾರಂಪರಿಕ ಸಲಹಾ ಸಮಿತಿಗೆ ಮಾರ್ಗದರ್ಶನ‌ ಮಾಡಲು ಸಿದ್ಧವಿರುವೆ. ಸರ್ಕಾರ ಬಯಸಿದ್ರೆ ಸಹಕಾರ ಕೊಡುತ್ತೇನೆ ಎಂದು ತಿಳಿಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ‌‌ ನಿರ್ವಹಣಾ ಮಂಡಳಿ ಆದೇಶ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬೇಗ ಉತ್ತಮ ಮಳೆಯಾಗ ಬೇಕೆಂದು ಪ್ರಾರ್ಥಿಸುವುದಷ್ಟೇ ನಮ್ಮ ಪಾಲಿನ ಕೆಲಸ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv