ಭೂ ಕುಸಿತ, ಮಂಗಳೂರು-ಬೆಂಗಳೂರು ರೈಲು ಸಂಚಾರ ರದ್ದು

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದ್ದು ಪುತ್ತೂರು ತಾಲೂಕಿನ ಶಿರಿಬಾಗಿಲು ಬಳಿ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಗುಡ್ಡ ಕುಸಿದಿದ್ದು, ಸುಬ್ರಹ್ಮಣ್ಯ-ಶಿರಿಬಾಗಿಲು ನಡುವೆ ರೈಲ್ವೇ ಹಳಿ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರೈಲು ಸಂಚಾರ ರದ್ದಾಗಿದೆ. ಇನ್ನು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಹಿಟಾಚಿ ಮೂಲಕ ಮಣ್ಣು ತೆರವು ಮಾಡಿಸಲಾಗುತ್ತಿದೆ. ಬೆಂಗಳೂರಿನಿಂದ-ಮಂಗಳೂರಿಗೆ ಹೊರಟಿದ್ದ ರೈಲು, ಹಾಸನದ ಕಡಗರವಳ್ಳಿ ಬಳಿ ನಿಂತಿದೆ. ಹಾಸನಕ್ಕೆ ರೈಲು ವಾಪಸ್ ಹೋಗುತ್ತಿದ್ದು ಪ್ರಯಾಣಿಕರಿಗೆ ಹಣ ವಾಪಸ್ ಮಾಡಲಾಗಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ.

ಮತ್ತೊಂದೆಡೆ, ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲನ್ನ ಸುಬ್ರಹ್ಮಣ್ಯ ಬಳಿ ಸ್ಥಗಿತಗೊಳಿಸಲಾಗಿದ್ದು, ಅದು ಮಂಗಳೂರಿಗೆ ವಾಪಸ್ ಆಗಲಿದೆ. ಆ ಪ್ರಯಾಣಿಕರಿಗೂ ಕೂಡಾ ಹಣ ಮರುಪಾವತಿಸಲು ನಿರ್ಧಾರ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv