ಗುಡ್ಡ ಕುಸಿತ: ಹಿರೇಬೈಲ್-ಬಾಳೆಹೊಳೆ ರಸ್ತೆ ಬಂದ್​

ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರೆದ ವರುಣನ ಅಬ್ಬರ ಮುಂದುವರಿದಿದೆ. ಕಳೆದ ರಾತ್ರಿ ಮೂಡಿಗೆರೆಯಲ್ಲಿ ಭಾರೀ ಮಳೆಯಾಗಿದ್ದು, ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿತದ ಜೊತೆಗೆ, ಗುಡ್ಡದ ಜೊತೆ‌ಗೆ, ಬೃಹತ್ ಮರವು ರಸ್ತೆಗೆ‌ ಉರುಳಿ ಬಿದ್ದಿದೆ. ಗುಡ್ಡ ಕುಸಿತದಿಂದ ಹಿರೇಬೈಲ್, ಬಾಳೆಹೊಳೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಬಂದ್​ ಆಗಿದ್ದು, ಎರಡು ಮನೆಗಳಿಗೆ ಹಾನಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv