ಹಳ್ಳ, ಏಣಿ, ಅಮವಾಸ್ಯೆ..!

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದರಿಯಾಪುರ ಸಮೀಪದ ನಾಗನಟಗಿ ರಸ್ತೆ ಮಾರ್ಗದ ಜಮೀನೊಂದರಲ್ಲಿ ಹಠಾತ್ತನೆ ಭೂಮಿ ಬಾಯ್ತೆರೆದಿರುವ ಘಟನೆ ನಡೆದಿದೆ.
ಸೋಪಣ್ಣ ತಂದೆ ದೇವಿಂದ್ರಪ್ಪ ದರಿಯಾಪುರ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಅಂದಾಜು ನಾಲ್ಕು ಅಡಿ ಅಗಲ 10 ರಿಂದ 12 ಅಡಿ ಆಳ ತಗ್ಗು ಬಿದ್ದಿದ್ದು, ಒಳಗಡೆ ಮಣ್ಣು ಗಟ್ಟಿಯಾಗಿಯೇ ಕಾಣುತ್ತಿದೆ. ಒಳಗಡೆ ನೀರು ಬಂದಿಲ್ಲ. ಒಳಭೂಮಿ ಕೊಡಾ ಗಟ್ಟಿಯಾಗಿದೆ. ಗ್ರಾಮೀಣ ರೈತಾಪಿ ಜನಗಳ ಪ್ರಕಾರ, ಒಳಗಡೆ ದೊಡ್ಡ ಸುರಂಗ ಕಂಡು ಬರುತ್ತಿದೆ ಎನ್ನುತ್ತಿದ್ದು, ಅಲ್ಲದೆ ನಿಧಿ ತೆಗೆದುಕೊಂಡು ಹೋಗಿರುವ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿದೆ.

ಈ ಬಗ್ಗೆ, ಸ್ಥಳೀಯರು ತಹಸೀಲ್ದಾರ ಗಮನಕ್ಕೆ ತಂದಿದ್ದು ಗ್ರಾಮಸ್ಥರು ಪ್ರಕಾರ ನಿಧಿ ಆಸೆಗೆ ತಗ್ಗು ತೋಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಉಪ ತಹಸೀಲ್ದಾರ ವೆಂಕಣ್ಣಗೌಡ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಾಯ್ತೆರದ ಭೂಮಿಯೊಳಗೆ ಏಣಿ ಇಡಲಾಗಿದ್ದು ಒಳಗಡೆ ಮನುಷ್ಯರು ಇಳಿದು ಪರಿಶೀಲನೆ ನಡೆಸಲು ಯತ್ನಿಸಿ ವಿಫಲವಾಗಿದೆ. ಏಣಿ ಒಳಗಡೆಯ ಜಾರಿತು ಎನ್ನಲಾಗಿದೆ. ಈಗ ಅಧಿಕಾರಿಗಳು ಜೆಸಿಬಿ ತರಿಸಿ ಅದರಿಂದ ತಗ್ಗು ಅಗಲಗೊಳಿಸಿ ಆಳದಲ್ಲಿ ಏನಿದೆ ತಗ್ಗು ಕೃತಕ ಸೃಷ್ಟಿನಾ ಅಥವಾ ನೈಸರ್ಗಿಕವಾಗಿ ತೆಗ್ಗು ಬಿದ್ದಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಒಟ್ಟಾರೆಯಾಗಿ ಇಂದು ಅಮವಾಸ್ಯೆ ಆದ್ದರಿಂದ ವಿವಿಧ ಊಹಾಪೂಹಗಳ ಮದ್ಯೆ ಗ್ರಾಮಸ್ತರಲ್ಲಿ ಗಾಬರಿ ಮೂಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv