ಲಂಬೋದರ.. ಸಿದ್ಲಿಂಗುಗಿಂತಾ ಒಳ್ಳೆ ಕೆ.ಡಿ..!

ಸಿನಿಮಾ: ಲಂಬೋದರ, ಬಸವನಗುಡಿ ಬೆಂಗಳೂರು
ತಾರಾಗಣ: ಲೂಸ್​ ಮಾದ ಯೋಗಿ, ಆಕಾಂಕ್ಷ, ಧರ್ಮಣ್ಣ, ಸಿದ್ದು ಮೂಲಿಮನಿ, ಅರುಣಾ ಬಾಲ​ರಾಜ್​,ಅಚ್ಯುತ್​ ರಾವ್
ನಿರ್ದೇಶಕ: ಕೃಷ್ಣ ರಾಜ್​
ಸಂಗೀತ ನಿರ್ದೇಶಕ: ಕಾರ್ತಿಕ್ ಶರ್ಮ
ಹಿನ್ನಲೆ ಸಂಗೀತ: ಮಿಥುನ್​ ಮುಕುಂದನ್​
ಕ್ಯಾಮರಾ: ಅರವಿಂದ್​ ಕಶ್ಯಪ್​
ನಿರ್ಮಾಣ: ವೃಷಾಂಕ್​ ಮೂವಿ ಮೇಕರ್ಸ್​

ಬಸವನಗುಡಿಯ ಲಂಬೋದರ ಹುಟ್ಟೋದು ಮನ್ಮಥನ ಜಾತಕದಲ್ಲಿ, ಹುಡುಗೀರೇ ಇವ್ನ ವೀಕ್​​ನೆಸ್ಸು​, ಡೈಲಿ ಸಂಜೆ ತೀರ್ಥ ಸೇವನೆ, ಊರುಸೂತ್ತೋದೇ ಇವರ ಬ್ಯುಸಿನೆಸ್ಸು, ಈ ಗ್ಯಾಪ್​ನಲ್ಲಿ ಸಿಗೋ ಎನ್​ಜಿಓ ಹುಡುಗೀನೇ ಭಾವಿ ಮಿಸ್ಸೆಸ್ಸು. ಆದ್ರೆ ಈ ಎಲ್ಲದರ ನಡುವೆಯೂ ಲಂಬೋದರ ಬದಲಾಗ್ತಾನೆ. ಮೇಲೆ ಹೇಳಿದ ಅವ್ನ ದಿನಚರಿ ಬದಲಾಗುತ್ತೆ. ಯಾಕೆ ಬದಲಾಗುತ್ತೆ, ಹೇಗೆ ಬದಲಾಗ್ತಾನೆ, ಪ್ರೀತಿ ಅವ್ನನ್ನ ಬದಲಾಯಿಸುತ್ತಾ..? ಪರಿಸ್ಥಿತಿ ಬದಲಾಯಿಸುತ್ತಾ ಅನ್ನೋದೇ ಲಂಬೋದರನ ಸಿಂಪಲ್​ ಸ್ಟೋರಿ ಲೈನ್​..!
ಲೂಸ್​ ಮಾದ ಯೋಗಿಯ ರಿ-ಎಂಟ್ರಿ ಎಕ್ಸ್​ಟ್ರಾರ್ಡಿನರಿ..!
ಒಂದು ಗ್ಯಾಪ್​ನ ನಂತ್ರ ಇಂಡಸ್ಟ್ರಿಗೆ ವಾಪಸ್ಸಾಗಿರೋ ಯೋಗಿ ನಟನೆಯಲ್ಲಿ ತುಂಬಾನೆ ಮಾಗಿದ್ದಾರೆ. ಆದ್ರೂ ಅವ್ರ ಟಿಪಿಕಲ್​​ ರಾ ನೆಸ್​​​ನಲ್ಲಿ ಚೇಂಜಸ್​ ಆಗಿಲ್ಲ. ಮೂರು ಗೆಟಪ್​ಗಳಲ್ಲಿ ಬರೋ ಯೋಗಿ ಇಡೀ ಸಿನಿಮಾದ ಸೆಂಟರ್​ ಆಫ್​ ಅಟ್ರಾಕ್ಷನ್. ಇನ್ನೂ ಲಂಬೋದರನ ಮನದನ್ನೆ ನಿತ್ಯಾ ಪಾತ್ರದಲ್ಲಿ ಆಕಾಂಕ್ಷ ನಟಿಸಿದ್ದು, ಪಾತ್ರಕಷ್ಟೆ ಸೀಮಿತವಾಗಿರ್ತಾರೆ. ಲಂಬೋದರನ ಗೆಳೆಯ ಗ್ಯಾಂಗ್​ನಲ್ಲಿ ಧರ್ಮಣ್ಣ, ಸಿದ್ದು ಮೂಲಿಮನಿ, ತಾಯಿ ಪಾತ್ರದಲ್ಲಿ ಅರುಣಾ ಬಾಲ​ರಾಜ್, ತಂದೆಯಾಗಿ ಅಚ್ಯುತ್​ ರಾವ್​​​​​​​​ ಎಲ್ಲರೂ ಸಿನಿಮಾದ ಆಸ್ತಿ. ಉಳಿದಂತೆ ಸಿನಿಮಾದಲ್ಲಿ ಬಂದು ಹೋಗೋ ಕ್ಯಾರೆಕ್ಟರ್​​​ಗಳು, ಸುಮ್ಮನೇ ಬಂದು ಹೋಗ್ತವೆ ಅಷ್ಟೆ.
ಟೆಕ್ನಿಕಲಿ ಬಸವನಗುಡಿಯ ಹುಡುಗರು ಸೂಪರ್ರು..!
ಸಿನಿಮಾದ ಮೊದಲ ಸೀನ್​ ಹಾಗು ಟೈಟಲ್​ ಕಾರ್ಡ್​ನ ನೋಡಿದಾಗ್ಲೆ ಸಿನಿಮಾದಲ್ಲಿ ಏನೋ ಹೊಸದನ್ನ, ಹಳೇ ಸ್ಟೈಲ್​ನಲ್ಲಿ ಟ್ರೈ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅದರಂತೆ ಸಿಂಪಲ್ಲಾದ ಸಿನಿಮಾದಲ್ಲಿ ಹೊಸ ಕೈಚಳಕಗಳು ಕಾಣದೇ ಹೋದ್ರು, ಕೆಲಸದಲ್ಲಿ ಪರ್ಫೆಕ್ಟ್​​ನೆಸ್​ ಇದೆ. ಬ್ಯಾಕ್​ಗ್ರೌಂಡ್​ ಸ್ಕೋರ್​​ನಲ್ಲಿ ಸ್ವಲ್ಪ ಇಷ್ಟವಾಗ್ತಾರೆ. ಎಡಿಟಿಂಗ್​, ಕ್ಯಾಮಾರಾ ವರ್ಕ್​ನಲ್ಲಿ ತೊಂದರೆ ಇಲ್ಲ, ಕೊಟ್ಟ ಕಾಸಿಗೆ ಮೋಸ ಇಲ್ಲ. ಉಳಿದಂತೆ ಸಿನಿಮಾ ಮೇಕಿಂಗ್​ನಲ್ಲಿ ಅಗತ್ಯತೆಗೇನು ಕೊರತೆ ಇಲ್ಲ ಅನ್ನಿಸುವಂತಿದೆ.
ಲಂಬೋದರನಲ್ಲಿ ಏನಿದೆ ಹೊಸಾದು..!
ಸಿನಿಮಾ ಟ್ರೇಲರ್​ ನೋಡಿದ ಜನ ಸಿದ್ಲಿಂಗು ಥರಾ ಇದೆ ಅಂತಿದ್ರು ಜನ..ಆದ್ರೆ ಈ ಸಿನಿಮಾದಲ್ಲಿ ಅಷ್ಟೆಲ್ಲಾ ಡಬಲ್​ ಮೀನಿಂಗ್​ ಇಲ್ಲ. ಸಿನಿಮಾದ ಒನ್​ ಲೈನ್​ ತುಂಬಾನೇ ಸಿಂಪಲ್​ ಆದ್ರೂ ಎಂಟರ್​ಟೈನ್​ಮೆಂಟ್​ಗೇನು ಕೊರತೆ ಇಲ್ಲ. ಆದ್ರೆ ಸಿನಿಮಾದ ಸಾಕಷ್ಟು ಸೀನ್​ಗಳ ಕಂಟಿನ್ಯುಟಿ ಮಿಸ್​ ಆಗಿದ್ದು, ಏನೋ ಮಿಸ್​ ಆಗಿದೆ ಅನ್ನಿಸುತ್ತೆ. ಮೊದಲಾರ್ಧ ಗಂಟೆಯಲ್ಲೇ 2 ಹಾಡುಗಳು ಬಂದು ಹೋದ್ರು, ನೆನಪಿನಲ್ಲುಳಿತವೆ, ಉಳಿದ ಹಾಡುಗಳೂ ಕಳಪೆ ಏನಲ್ಲ. ಸಿನಿಮಾದಲ್ಲಿ ಮೇಜರ್​ ಪ್ಲಸ್​ ಅನ್ನಿಸೋದು ಹೊಟ್ಟೆ ನೋವು ಬರಿಸೋ ಕಾಮಿಡಿ ಡೈಲಾಗ್​ಗಳು ಮಾಸ್​ ಸಿನಿಮಾ ಇಷ್ಟ ಪಡೋರಿಗಂತಾನೆ 2 ಫೈಟ್​ ಇಟ್ಟಿದ್ದು, ಅದು ನಾಮಕಾವಸ್ತೆಯ ಫೈಟ್ಸ್​​​​ ಅಷ್ಟೆ.
ಸಿದ್ಲಿಂಗು ಅಪ್​ಡೇಟೆಡ್​ ವರ್ಷನ್​ ಲಂಬೋದರ..!
ವಯಸ್ಸಿಗೆ ಬಂದ ಮಕ್ಕಳ ಡೌಟ್​ಗಳನ್ನ, ಬಗೆಹರಿಸದ ಅಪ್ಪ ಅಮ್ಮಂದಿರು, ಸ್ಕೂಲ್​ ಟೀಚರ್​ಗಳು ಬಗೆಹರಿಸೋದೆ ಹೋದ್ರೆ, ಎಂಥಾ ಪ್ರಾಬ್ಲಂ ಆಗುತ್ತೆ ಅನ್ನೋದನ್ನ ಕಾಮಿಡಿಯ ಫ್ಲಾಟ್​ ಫಾರ್ಮ್​ ಮೇಲೆ ಹೇಳಹೊರಟಿರೋ ನಿರ್ದೇಶಕರ ಐಡಿಯಾ ಚೆನ್ನಾಗಿದೆ. ಯೋಗಿಯ ಸಿದ್ಲಿಂಗು ಸಿನಿಮಾ ನೋಡಿ ಇಷ್ಟ ಪಟ್ಟೋರಿಗೆ, ಈ ಸಿನಿಮಾ ಕೂಡ ಇಷ್ಟವಾಗೇ ಆಗುತ್ತೆ. ಆದ್ರೆ ಕುಟುಂಬ ಸಮೇತ ಒಂದು ಬಾರಿ ಕೂತು ಆರಾಮಾಗಿ ನೋಡಬಹುದಾದ, ಸಿಂಪಲ್​ ಎಂಟರ್​ಟೈನರ್​ ಸಿನಿಮಾ ಲಂಬೋದರ ಬಸವನಗುಡಿ ಬೆಂಗಳೂರು.

ವಿಮರ್ಶೆ: ಕಿರಣ್​ ಚಂದ್ರ