ಲಾಲೂ ಕುಟುಂಬಕ್ಕೆ ಸೇರಿದ 44.75 ಕೋಟಿಯ ಜಮೀನು ವಶ

ಪಾಟ್ನಾ: ಆರ್​ಜೆಡಿ ನಾಯಕ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್​ ಕುಟುಂಬಕ್ಕೆ ಸೇರಿದ 44.75 ಕೋಟಿಯ 12 ಜಮೀನುಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಌಕ್ಟ್​ನ ಪ್ರಕಾರ ವಶಪಡಿಸಿಕೊಂಡಿರುವ ಲಾಲೂ ಜಮೀನಿನ ಒಡೆತನವನ್ನು ಕೇಂದ್ರ ತನಿಖಾ ಆಯೋಗ ಹೊಂದುತ್ತದೆ.
2017ರ ಜುಲೈ ತಿಂಗಳಿನಲ್ಲಿ ಲಾಲೂ ಪ್ರಸಾದ್ ಯಾದವ್ ಹಾಗೂ ಕುಟುಂಬದ ವಿರುದ್ಧ ಕೇಂದ್ರ ತನಿಖಾ ಇಲಾಖೆ ಕೇಸ್ ದಾಖಲಿಸಿತ್ತು.

ಇದಕ್ಕೂ ಮೊದಲು ಸಿಬಿಐ ಲಾಲೂ ಯಾದವ್ ಮೇಲೆ ಎಫ್ಐಆರ್​ ದಾಖಲಿಸಿತ್ತು. ಸದ್ಯ ಬಹುಕೋಟಿ ಮೇವು ಹಗರಣದಲ್ಲಿ ಲಾಲು ಯಾದವ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv