ಮೋದಿ ಭಾಷಣಕ್ಕೆ ಲಾಲೂ ಪ್ರಸಾದ್​ ಯಾದವ್​ ಡಬ್​​​ಸ್ಮ್ಯಾಶ್​​

ನವದೆಹಲಿ: ಮೇವು ಹಗರಣದಲ್ಲಿ ಸದ್ಯ ಜೈಲುವಾಸ ಅನುಭವಿಸುತ್ತಿರೋ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್​​ ಯಾದವ್​, ಟ್ವಿಟರ್​​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿರುತ್ತಾರೆ. ಸದ್ಯ ಲೋಕಸಭಾ ಚುನಾವಣೆಯ ಪ್ರಚಾರ ರಂಗೇರುತ್ತಿದ್ದು, ಲಾಲೂ ಮೋದಿಯನ್ನು ಟೀಕೆ ಮಾಡಲು ಡಬ್​ಸ್ಮ್ಯಾಶ್​​ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಮೋದಿ 2014ರ ಚುನಾವಣೆ ವೇಳೆ ಮಾಡಿದ್ದ ಘೋಷಣೆಗಳಿಗೆ ಲಾಲು ಡಬ್​ ಮಾಡಿದ್ದಾರೆ.

2014ರ ಱಲಿ ವೇಳೆ ಮೋದಿ, ಅಚ್ಚೇ ದಿನ ಆಯೇಗಾ ಎಂಬ ಘೋಷವಾಕ್ಯ ಹೇಳಿದ್ದರು. ಇದಕ್ಕೆ ಲಾಲೂ ಲಿಪ್​ ಸಿಂಕ್​ ಮಾಡಿದ್ದಾರೆ. ಇದರ ಜೊತೆಗೆ ಪ್ರತಿ ಭಾರತೀಯನಿಗೆ 15 ರಿಂದ 20 ಲಕ್ಷ ಸಿಗಲಿದೆ ಅಂತ ಮೋದಿ ಹೇಳಿರೋ ರೆಕಾರ್ಡಿಂಗ್​​​​ಗೆ ಲಾಲು ಲಿಪ್ ಸಿಂಕ್ ಮಾಡಿ ಡಬ್​ಸ್ಮ್ಯಾಶ್​ ಮಾಡಿದ್ದಾರೆ. ಈ ವಿಡಿಯೋವನ್ನ ಎಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ.ಇನ್ನು ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿ, ಉಚಿತವಾಗಿ ತಗೊಳ್ಳಿ 15 ಲಕ್ಷ, ಅಚ್ಚೇ ದಿನ್​ ಹಾಗೂ ಜುಮ್ಲಾ ಅಂತ ಬರೆದುಕೊಂಡಿದ್ದಾರೆ.

ಮೇವು ಹಗರಣ ಸಾಬೀತಾಗಿ ಜೈಲು ಸೇರಿರೋ ಲಾಲೂ, ಈಗ ಜೈಲಿನಿಂದಲೇ ಸೂಚನೆ ಕೊಟ್ಟು ಟ್ವೀಟ್ ಮಾಡಿಸುತ್ತಾರೆ. ಈ ಬಗ್ಗೆ ಹಿಂದೆಯೇ ಅವರೇ ಒಮ್ಮೆ ಟ್ವೀಟ್ ಮಾಡಿದ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv