ನಮಗೂ ಇದೆಲ್ಲಾ ನೋಡಿ ಬೇಸರವಾಗಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್​

ರಾಮನಗರ: ರೆಸಾರ್ಟ್‌ ರಾಜಕಾರಣದ ಬಗ್ಗೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ನೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಈಗಲ್ಟನ್‌ ರೆಸಾರ್ಟ್‌ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ವಾತಾವರಣ ಹದಗೆಡುತ್ತಿದೆ. ನಮಗೂ ಕೂಡ ಇದು ಚೆನ್ನಾಗಿ ಕಾಣಿಸ್ತಿಲ್ಲ. ರಾಜ್ಯದ ಜನರು ಇದೆಲ್ಲವನ್ನೂ ನೋಡ್ತಾ ಇದ್ದಾರೆ. ನಮಗೂ ಕೂಡ ಇದೆಲ್ಲ ನೋಡಿ ಬೇಸರವಾಗಿದೆ. ಎಲ್ಲರೂ ಲೋಕಸಭೆ ಚುನಾವಣೆಗೆ ಒಗ್ಗಟ್ಟಾಗಿರಬೇಕು ಅಂತಾ ಚರ್ಚೆ ನಡೆಸಲು ರೆಸಾರ್ಟ್‌ಗೆ ಬಂದಿದ್ದೇವೆ. ಆದಷ್ಟು ಬೇಗ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv