ಸಾಯುತ್ತೇನೆಂದು, ಸ್ಟೇಟಸ್ ಹಾಕಿ ಮಹಿಳೆ ಆತ್ಮಹತ್ಯೆ

ಕೋಲಾರ: ನಾನು ಸಾಯುತ್ತೇನೆ ಅಂತಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ. ದಿವ್ಯಾ (23) ಎಂಬ ಮಹಿಳೆಗೆ ತನ್ನ ಚಿಕ್ಕಮ್ಮ ರಾಧಮ್ಮನೊಂದಿಗೆ ಚಿನ್ನದ ಒಡವೆ ವಿಚಾರವಾಗಿ ಮನಸ್ತಾಪ ಬೆಳೆದಿತ್ತೆನ್ನಲಾಗಿದೆ. ಇದರಿಂದ ಬೇಸತ್ತ ದಿವ್ಯಾ, ಫೇಸ್​ಬುಕ್‌ನಲ್ಲಿ ಹಲವು ಪೋಟೋಗಳನ್ನು ಹಾಕಿ ಆ ಮೂಲಕ ತನ್ನ ನೋವನ್ನು ಹೊರ ಹಾಕಿದ್ದಳು. ತಾನು ಸಾಯ್ತಾ ಇದ್ದೀನಿ ಅಂತಾನೂ ಸ್ಟೇಟಸ್ ಹಾಕಿಕೊಂಡಿದ್ದಳು.
ಮೃತ ದಿವ್ಯಾ ಮೂರು ವರ್ಷದ ಹಿಂದೆ ರಾಮಚಂದ್ರ ಎಂಬಾತನನ್ನ ಪ್ರೀತಿಸಿ ಎರಡನೆ ಪತ್ನಿಯಾಗಿದ್ದಳು. ಘಟನೆ ಕುರಿತು ಮುಳಬಾಗಿಲು ಗಾಽಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv