ಸಾಲ ಬಾಧೆ ತಾಳಲಾರದೆ ನೇಣಿಗೆ ಶರಣಾದ ಕೂಲಿಕಾರ್ಮಿಕ

ದಾವಣಗೆರೆ: ಸಾಲ ಬಾಧೆ  ತಾಳಲಾರದೆ ಕೂಲಿಕಾರ್ಮಿಕ ಒಬ್ಬರು ನೇಣಿಗೆ ಶರಣಾದ ಘಟನೆ, ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆದಿದೆ. ಉಸ್ಮಾನ್​ ಸಾಬ್(35​) ಮೃತ ಕೂಲಿಕಾರ್ಮಿಕ, ಆತ ನಗರದ ಭಾಷಾನಗರದ ನಿವಾಸಿ. ಹಲವರಿಂದ ಉಸ್ಮಾನ್​ ಸಾಬ್​  ಸಾಲಮಾಡಿಕೊಂಡಿದ್ದರು. ನಂತರ ಸಾಲಗಾರರು ಹಣ ವಾಪಸ್​  ಕೊಂಡುವಂತೆ ಒತ್ತಾಯಿಸಿದ್ದಾರೆ.  ಸಾಲ ಸರಿಯಾಗಿ ಪಾವತಿಸಲು ಆಗದೆ ಇದ್ದಿದ್ದರಿಂದ ಬೇಸತ್ತ ಉಸ್ಮಾನ್ ಸಾಬ್ ಎಪಿಎಂಸಿ ಮಾರುಕಟ್ಟೆ ಆವರಣದ‌ಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.