ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

ರಾಯಚೂರು: ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ. ದೌಲಸಾಬ ಅನ್ವರಿ (46) ಮೃತಪಟ್ಟ ಕಾರ್ಮಿಕ. ಕಾರ್ಮಿಕ ದೌಲಸಾಬ ಮೈನಿಂಗ್ ಮಾಡುವ ಸಲುವಾಗಿ ಮಣ್ಣು ಗಟ್ಟಿತನ ಬಗ್ಗೆ ಚೆಕ್ ಮಾಡಲು ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ. ಇನ್ನಿಬ್ಬರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದ್ದು, ರಕ್ಷಣಾಕಾರ್ಯ ನಡೀತಿದೆ. ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ರು. ಘಟನೆಯಲ್ಲಿ ಗಾಯಗೊಂಡವರನ್ನು ಹಟ್ಟಿ ಕಂಪನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಕಾರ್ಮಿಕ ದೌಲಾಸಾಬ ಅನ್ವರಿ ಕುಟುಂಬಕ್ಕೆ ಚಿನ್ನದ ಗಣಿ ಕಂಪನಿಯಿಂದ 6 ಲಕ್ಷ 65 ಸಾವಿರ ರೂಪಾಯಿ ಪರಿಹಾರ ನೀಡಿದೆ. ವರ್ಕರ್ ಆಕ್ಟ್ ಅಡಿಯಲ್ಲಿ ತಕ್ಷಣವೇ ಪರಿಹಾರ ದೂರೆಯಲಾಗಿದೆ. ಅಲ್ಲದೇ ಪುತ್ರ ಮೌಲಾ ಸಾಬ್​​ಗೆ ಕಂಪನಿಯಲ್ಲಿ ಕೆಲಸ ನೀಡುವ ಭರವಸೆ ನೀಡಿದೆ. ಕಂಪನಿಯ ಅಧಿಕಾರಿಗಳು ಕುಟುಂಬಕ್ಕೆ ಪರಿಹಾರ ಧನ, ಅಪಾಯಿಂಟ್ ಮೆಂಟ್ ಪತ್ರ ನೀಡಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv