ಮಂಡ್ಯದಲ್ಲಿ ಜೆಡಿಎಸ್​​ ಪ್ರಚಾರಕ್ಕೆ ಬೆಂಗಳೂರು ಜನ, ತಲೆಗೆ ₹500..!? ಆಡಿಯೋದಲ್ಲಿ ಏನಿದೆ?

ಮಂಡ್ಯ: ಸಂಸದ ಎಲ್. ಆರ್. ಶಿವರಾಮೇಗೌಡ  ಜೊತೆ ಡಾನ್​ ರಮೇಶ ಎಂಬುವವರು ಜೆಡಿಎಸ್​​ ಪ್ರಚಾರದ ಕುರಿತು ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಇದರಿಂದ  ಜೆಡಿಎಸ್, ಮಂಡ್ಯ ಪ್ರಚಾರಕ್ಕೆ ಹೊರಗಿನ ಜನರನ್ನ ಕರೆಸ್ತಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಶಿವರಾಮೇಗೌಡ ಹಾಗೂ ರಮೇಶ್ ಮಧ್ಯೆ ನಡೆದಿದೆ ಎನ್ನಲಾದ 43 ಸೆಕೆಂಡ್​​ನ  ಆಡಿಯೋದಲ್ಲಿ , ಪ್ರಚಾರಕ್ಕೆ ಬರುವ ಜನರಿಗೆ ತಲೆಗೆ ₹500 ಕೊಡುವುದಾಗಿ ಮಾತನಾಡಿರೋದನ್ನ ಕೇಳಬಹುದು.

ದೂರವಾಣಿ ಸಂಭಾಷಣೆಯಲ್ಲಿ ಏನಿದೆ? 

ಶಿವರಾಮೇಗೌಡ: ಹೇಳಿ ರಮೇಶಣ್ಣ

ರಮೇಶ್: ಅಣ್ಣ, ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್ ಗೆ ಅಣ್ಣ

ಶಿವರಾಮೇಗೌಡ: ಯಾರ್ ಮಾತಾಡ್ತ ಇರೋದು?

ರಮೇಶ್: ಅಣ್ಣ ನಾನೇ ರಮೇಶ ಅಣ್ಣ ರಮೇಶನೇ

ಶಿವರಾಮೇಗೌಡ: ನಮ್ಮ ಡಾನ್?

ರಮೇಶ್: ಹೂ ಅಣ್ಣ

ಶಿವರಾಮೇಗೌಡ: ನಾಳೆಯಿಂದಲೇ…

ರಮೇಶ್: ಹ.. ಹಹಹ, ಅಣ್ಣ ಬೆಂಗಳೂರಿನವರನೆಲ್ಲ ಕರ್ಕೊಂಡು ಬರಬೇಕು ಹೆಂಗೆ ಮಾಡೋದು ವ್ಯವಸ್ಥೆ?

ಶಿವರಾಮೇಗೌಡ: ಎಲ್ಲಾ ಎಲ್ಲಾ 500 ರೂಪಾಯಿ ಕೊಡ್ತೀವಿ ತಲೆಗೆ ಕರ್ಕೊಂಡು ಬಾ..

ರಮೇಶ್: ಎಲ್ಲರನ್ನೂ ಕರ್ಕೊಂಡು ಬರ್ಲಾ?

ಶಿವರಾಮೇಗೌಡ: ಓ.. ಎಲ್ಲಾ ಬರ್ಬೇಕು

ರಮೇಶ್: ಬರ್ತಾರಣ್ಣ, ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ.. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣ?

ಶಿವರಾಮೇಗೌಡ: ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ ಐದು ನೂರು ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ದೀವಿ.

ರಮೇಶ್: ಅಪ್ಪಾಜಿಗೌಡ್ರಗಣ್ಣ, ಆಯ್ತು ಸರಿ ಅಣ್ಣ, ಸರಿ ಅಣ್ಣ, ಆಯ್ತಣ್ಣ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv