ಕೈಲೀ ಜೆನ್ನರ್ ಅಮೆರಿಕಾದ ಅತ್ಯಂತ ಕಿರಿಯ ಕೋಟ್ಯಾಧೀಶೆ..!

ನ್ಯೂಯಾರ್ಕ್‌: ಅಮೆರಿಕಾದ ಮಾಡೆಲ್ , ಸುರದ್ರೂಪಿ ಚೆಲುವೆ ಕೈಲೀ ಜೆನ್ನರ್ ಹೊಸ ದಾಖಲೆ ಬರೆದಿದ್ದಾರೆ. ತನ್ನ 20ನೇ ವಯಸ್ಸಿಗೆ ಸಂಪಾದನೆ ಮೂಲಕ ಬಿಲಿಯನೇರ್​​ ಆಗಿದ್ದಾರೆ. ಮೂರು ವರ್ಷದೊಳಗೆ 900 ಮಿಲಿಯನ್‌ (₹6,187 ಕೋಟಿ ರೂ.) ಗಳಷ್ಟು ಸಂಪತ್ತನ್ನು ಗಳಿಸುವ ಮೂಲಕ 20 ವರ್ಷದೊಳಗಿನ ಬಿಲಿಯನೇರ್​​​ಗಳ ವಾರ್ಷಿಕ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದ್ದಾರೆ. ಈ ಎಲ್ಲಾ ಗಳಿಕೆಯ ಬಹುಪಾಲು ಕೈಲೀ ಒಡೆತನದ ಕಾಸ್ಮೆಟಿಕ್ಸ್ ಕಂಪೆನಿಯಿಂದ ಬಂದಿದೆ. ಸುಮಾರು 630 ಮಿಲಿಯನ್(₹43,29,99,00,000 ಕೋಟಿ) ಯುಎಸ್ ಡಾಲರ್ ಮೌಲ್ಯದ ಉತ್ಪನ್ನವನ್ನ ಕೈಲೀ ಕಂಪನಿ ಮಾರಾಟ ಮಾಡಿದೆ. ಈ ಮೂಲಕ ಮಾಡೆಲ್ ಕೈಲೀ ಜೆನ್ನರ್ ಈ ವರ್ಷದ ಫೋರ್ಬ್ಸ್ ಮ್ಯಾಗ್‌ಜಿನ್‌ನ 60 ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಫೋರ್ಬ್ಸ್ ಪತ್ರಿಕೆಯ ಕವರ್ ಪೇಜ್‌ನಲ್ಲಿ ಕಾಣಿಿಸಿಕೊಂಡಿದ್ದಾರೆ.