ಕೈಲಿ ಜೆನ್ನರ್​​​ಗಿಂತ ಮೊಟ್ಟೆ ಫೋಟೋಗೆ ಹೆಚ್ಚು ಲೈಕ್ಸ್​, ವಿಶ್ವ ದಾಖಲೆ

ಅತೀ ಹೆಚ್ಚು ಲೈಕ್ಸ್​ ಪಡೆದ ಇನ್ಸ್​​ಟಾಗ್ರಾಂ ಫೋಟೋದ ವಿಶ್ವ ದಾಖಲೆ ಈವರೆಗೆ ಅಮೇರಿಕಾ ಸೆಲೆಬ್ರಿಟಿ ಕೈಲಿ ಜೆನ್ನರ್​​ ಹೆಸರಿನಲ್ಲಿತ್ತು. ಈಗ ಆ ದಾಖಲೆ ಬ್ರೇಕ್​ ಆಗಿದೆ. ಅದೂ ಯಾರೋ ಸೆಲೆಬ್ರಿಟಿ ಅಥವಾ ಸ್ಟಾರ್​ ಈ ದಾಖಲೆ ಮುರಿದಿಲ್ಲ. ಬದಲಾಗಿ ಒಂದು ಮೊಟ್ಟೆಯ ಫೋಟೋ ಕೈಲಿ ಜೆನ್ನರ್​ ಫೋಟೋಗಿಂತ ಹೆಚ್ಚು ಲೈಕ್ಸ್​ ಪಡೆದು ಆಕೆಯ ವಿಶ್ವ ದಾಖಲೆಯನ್ನ ಉಡೀಸ್​ ಮಾಡಿದೆ.
ಜನವರಿ 4ರಂದು ವರ್ಲ್ಡ್​​ ರೆಕಾರ್ಡ್​​ ಎಗ್​ ಎಂಬ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಮೊಟ್ಟೆಯ ಫೋಟೋ ಪೋಸ್ಟ್​ ಮಾಡಲಾಗಿತ್ತು. “ಈ ಮೊಟ್ಟೆ ಅತೀ ಹೆಚ್ಚು ಲೈಕ್ಸ್​ ಗಳಿಸಿ ವಿಶ್ವ ದಾಖಲೆ ನಿರ್ಮಿಸುವಂತೆ ಮಾಡೋಣ. ಸದ್ಯ ಕೈಲಿ ಜೆನ್ನರ್​ ಹೆಸರಿನಲ್ಲಿರೋ ರೆಕಾರ್ಡ್​ ಬ್ರೇಕ್​ ಮಾಡೋಣ” ಅಂತ ಬರೆಯಲಾಗಿತ್ತು. ಅದರಂತೆ ಜ.14ರ ಬೆಳಗ್ಗೆ ಹೊತ್ತಿಗೆ ಮೊಟ್ಟೆಯ ಫೋಟೋ 2.1 ಕೋಟಿ ಲೈಕ್ಸ್​ ಗಿಟ್ಟಿಸಿದೆ. ಈ ಮೂಲಕ ಅತೀ ಹೆಚ್ಚು ಲೈಕ್ಸ್​ ಪಡೆದ ಇನ್ಸ್​​ಟಾಗ್ರಾಂ ಫೋಟೋ ಎಂಬ ಹೊಸ ದಾಖಲೆ ನಿರ್ಮಿಸಿದೆ. ಈವರೆಗೆ ಈ ಫೋಟೋ 4 ಕೋಟಿಗೂ ಹೆಚ್ಚು ಲೈಕ್ಸ್​ ಪಡೆದು ಮುಂದೆ ಸಾಗ್ತಿದೆ.

ಮಗಳು ಸ್ಟಾರ್ಮಿ ತನ್ನ ಕೈಬೆರಳು ಹಿಡಿದುಕೊಂಡಿದ್ದ ಫೋಟೋವನ್ನ ಕೈಲಿ ಜೆನ್ನರ್​​ 2018ರ ಫೆಬ್ರವರಿ 6ರಂದು ಪೋಸ್ಟ್​ ಮಾಡಿದ್ದರು. ಈ ಫೋಟೋ 1.8 ಕೋಟಿ ಲೈಕ್ಸ್​ ಪಡೆದು ವಿಶ್ವ ದಾಖಲೆ ನಿರ್ಮಿಸಿತ್ತು. ಈಗ ಕೈಲಿಯನ್ನ ಮೊಟ್ಟೆ ಫೋಟೋ ಓವರ್​ ಟೇಕ್​ ಮಾಡಿದೆ. 2.1 ಕೋಟಿ ಲೈಕ್ಸ್​ ಜೊತೆಗೆ 8 ಲಕ್ಷ ಕಮೆಂಟ್ಸ್​ ಕೂಡ ಪಡೆದಿದೆ.

ಇನ್ನು ಮೊಟ್ಟೆಯ ಫೋಟೋ ವಿಶ್ವ ದಾಖಲೆ ನಿರ್ಮಿಸಿರೋದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್​ ಮಾಡ್ತಿದ್ದಾರೆ. ತನ್ನ ವಿಶ್ವ ದಾಖಲೆಯನ್ನ ಮೊಟ್ಟೆಯ ಫೋಟೋ ಬ್ರೇಕ್​ ಮಾಡಿದೆ ಎಂಬ ಸುದ್ದಿ ತಿಳಿದ ಕೈಲಿ, ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಆಕೆ ಮೊಟ್ಟೆಯೊಂದನ್ನ ಒಡೆದು ರಸ್ತೆ ಮೇಲೆ ಹಾಕೋದನ್ನ ನೋಡಬಹುದು. ತನ್ನ ವಿಶ್ವ ದಾಖಲೆಯನ್ನ ಮೊಟ್ಟೆ ಬ್ರೇಕ್ ಮಾಡಿದೆ ಎಂದು ಗೊತ್ತಾದಾಗ ಕೈಲಿ ರಿಯಾಕ್ಷನ್​ ಹೀಗಿರುತ್ತೆ ಅಂತ ಆ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

View this post on Instagram

stormi webster 👼🏽

A post shared by Kylie (@kyliejenner) on

View this post on Instagram

Take that little egg

A post shared by Kylie (@kyliejenner) on