ವಾಂಖೆಡೆಯಲ್ಲಿ ಕನ್ನಡಿಗ ರಾಹುಲ್ ಶತಕದ ಹೊರತಾಗಿಯೂ ಸೋತ ಪಂಜಾಬ್

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಆಟವಾಡಿದ ಕನ್ನಡಿಗ ಕೆ.ಎಲ್​.ರಾಹುಲ್​ ಐಪಿಎಲ್​​ನಲ್ಲಿ ಮೊದಲ ಶತಕ ದಾಖಲಿಸಿದ್ದಾರೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 64 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್​ ಸಿಡಿಸಿ ​ಶತಕ ದಾಖಲಿಸಿದ್ದಾರೆ. ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್​ ಕ್ರಿಸ್​ ಗೇಲ್​ ಜೊತೆ ಮೊದಲ ವಿಕೆಟ್​ಗೆ 116 ರನ್​ಗಳ ಜೊತೆಯಾಟವಾಡಿದ್ರು. ಈ ಬಾರಿಯ ಐಪಿಎಲ್​ನಲ್ಲಿ 1 ಶತಕ, 3 ಅರ್ಧಶತಕ ಗಳಿಸಿರುವ ಕೆ.ಎಲ್​.ರಾಹುಲ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಕಣ್ಣಿಟ್ಟಿದ್ದಾರೆ. ಐಪಿಎಲ್​ನಲ್ಲಿ ಶತಕ ಸಿಡಿಸಿದ ಕರ್ನಾಟಕದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್​ ಪಾತ್ರರಾದರು. 2009ರ ಐಪಿಎಲ್​ ಪಂದ್ಯದಲ್ಲಿ ಡೆಕ್ಕನ್​ ಚಾರ್ಜರ್ಸ್​ ವಿರುದ್ಧ ಆರ್​ಸಿಬಿ ಪರ ಆಡುತ್ತಿದ್ದ ಮನೀಷ್​ ಪಾಂಡೆ ಐಪಿಎಲ್ ಶತಕ ಸಿಡಿಸಿದ ಕರ್ನಾಟಕದ ಹಾಗೂ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕೆ.ಎಲ್. ರಾಹುಲ್ ಶತಕದ ನೆರವಿನಿಂದ, ಪಂಜಾಬ್, 197 ರನ್​ಗಳ ಬೃಹತ್ ಮೊತ್ತವನ್ನೇ ಗಳಿಸಿತು. ಆದ್ರೆ ಪಂಜಾಬ್ ನೀಡಿದ್ದ 198 ರನ್​ಗಳ ಟಾರ್ಗೆಟ್​ನ್ನು ಕೀರನ್​ ಪೊಲಾರ್ಡ್​ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಬೆನ್ನಟ್ಟಿದ್ದ ಮುಂಬೈ ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv