ಉಪಚುನಾವಣೆಗೆ ಕೈ ಅಭ್ಯರ್ಥಿಗಳು ಫೈನಲ್: ಕುಸುಮಾ ಶಿವಳ್ಳಿ, ಸುಭಾಷ್ ರಾಠೋಡ್ ಕಣಕ್ಕೆ

ಬೆಂಗಳೂರು: ಲೋಕಸಭೆ ಚುನಾವಣೆ ರಾಜ್ಯದಲ್ಲಿ ಮುಗಿಯುತ್ತಿದ್ದಂತೆ ವಿಧಾನಸಭೆ ಉಪಚುನಾವಣೆಯ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇದೀಗ ಮೈತ್ರಿ ಸರ್ಕಾರ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕುಸುಮಾವತಿ ಶಿವಳ್ಳಿ, ಕಲಬುರ್ಗಿ ಜಿಲ್ಲೆ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿಯಾಗಿ ಸುಭಾಷ್ ರಾಠೋಡ್​ ಅವ್ರನ್ನ ಕಣಕ್ಕೆ ಇಳಿಸಿದೆ. ಇಂದು ನಡೆದ ಕೈ ನಾಯಕರ ‌ಸಭೆಯಲ್ಲಿ ಈ ಅಭ್ಯರ್ಥಿಗಳ ಹೆಸರನ್ನ ಒಮ್ಮತದಿಂದ ಫೈನಲ್ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv