ಕುಶಾಲನಗರ ಸ್ಥಬ್ದ , ಜನಜೀವನ ಅಸ್ತವ್ಯಸ್ತ

ಕೊಡಗು: ಕುಶಾಲನಗರ ‘ಕಾವೇರಿ’ ತಾಲೂಕು ರಚನೆಯಾಗದ ಹಿನ್ನೆಲೆಯಲ್ಲಿ, ಸರ್ಕಾರದ ನಡೆ ಖಂಡಿಸಿ‌ ಇಂದು ಕುಶಾಲನಗರ ಬಂದ್​ಗೆ ಕರೆ ನೀಡಲಾಗಿದೆ.  ಕುಶಾಲನಗರ ತಾಲೂಕು ಹೋರಾಟ ಸಮಿತಿಯಿಂದ ಬಂದ್ ಕರೆ ನೀಡಲಾಗಿದ್ದು, ಛೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಸಂಘ ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಸದ್ಯ ಕುಶಾಲನಗರ ಸೋಮವಾರಪೇಟೆ ತಾಲೂಕು ಹಾಗೂ ಕೊಡಗು ಜಿಲ್ಲೆಗೆ ಸೇರುತ್ತದೆ. ಇದೀಗ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದ್ದು, ಸರ್ವ ಪಕ್ಷಗಳಿಂದ ಬಂದ್‌ಗೆ ಬೆಂಬಲ ನೀಡಿದೆ.

ರಾಜ್ಯ ಸರ್ಕಾರದ ಈ ಸಾಲಿನ ಬಜೆಟ್‌ನಲ್ಲೂ ಕುಶಾಲನಗರ ತಾಲೂಕು ರಚನೆ ಮಾಡುವ ನಿರೀಕ್ಷೆಯಿತ್ತು. ಆದರೆ ಸರ್ಕಾರ ಹೊಸದಾಗಿ ನಾಲ್ಕು ತಾಲೂಕು ರಚನೆ ಮಾಡಿದ್ದು, ಕೊಡಗು ಜಿಲ್ಲೆಯ ಬಹುವರ್ಷದ ಬೇಡಿಕೆಯಾಗಿದ್ದ ಕುಶಾಲನಗರ ತಾಲೂಕು ರಚನೆ ಹಕ್ಕೊತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ.‌ ಹೀಗಾಗಿ  ಕಳೆದ ಶುಕ್ರವಾರ ಸಂಜೆ ಕುಶಾಲನಗರ ತಾಲೂಕು ರಚನೆ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿತ್ತು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv