ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್‌ಐ ಚಿಕ್ಕನಗೌಡರ್ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ: ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್‌ಐ ಚಿಕ್ಕನಗೌಡರ್ ನಾಮಪತ್ರ ಸಲ್ಲಿಸಿದ್ದಾರೆ. ಕುಂದಗೋಳ ತಾಲೂಕು ಕಚೇರಿಯಲ್ಲಿ ಬಿ-ಫಾರ್ಮ್‌ನೊಂದಿಗೆ ಎಸ್‌ಐ ಚಿಕ್ಕನಗೌಡರ್ ನಾಮಪತ್ರ ಸಲ್ಲಿಸಿದರು. ಇಂದು ಮಧ್ಯಾಹ್ನ ಚಿಕ್ಕನಗೌಡರ್ ಮತ್ತೊಂದು ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೃಹತ್ ಮೆರವಣಿಗೆ ಮೂಲಕ ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಇದುವರೆಗೂ ಆರು ಚುನಾವಣೆ ಎದುರಿಸಿದ್ದೆೇನೆ. ಟಿಕೆಟ್ ಆಕಾಂಕ್ಷಿ ಎಂ.ಆರ್ ಪಾಟೀಲ್ ಬೇರೆ ಅಲ್ಲ. ಚಿಕ್ಕನಗೌಡರ್ ಬೇರೆಯಲ್ಲ. ಕ್ಷೇತ್ರದಲ್ಲಿ ನಾವಿಬ್ಬರೂ ಒಂದೇ. ನಾವು ಅವರು ಒಟ್ಟಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೆೇನೆ ಎಂದು ಬಿಜೆಪಿ ಅಭ್ಯರ್ಥಿ ಎಸ್‌ಐ ಚಿಕ್ಕನಗೌಡರ್ ಹೇಳಿದರು. ನಾಮಪತ್ರ ಸಲ್ಲಿಕೆ ವೇಳೆ ಜಗದೀಶ್ ಶೆಟ್ಟರ್, ಜೋಷಿ, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ ಭಾಗಿಯಾಗಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv