ಕುಂದಗೋಳ ಉಪ ಸಮರ; ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯಾಗಿ ಶಿವಾನಂದ ಬೆಂತೂರ ನಾಮಪತ್ರ

ಹುಬ್ಬಳ್ಳಿ: ಕುಂದಗೋಳ ಕಾಂಗ್ರೆಸ್‌ನಲ್ಲಿ ಬಂಡಾಯದ ಕಹಳೆ ಮೊಳಗಿದೆ. ಉಪ-ಚುನಾವಣೆಗೆ ಕಾಂಗ್ರೆಸ್​ನಿಂದ ಬಂಡಾಯ ಅಭ್ಯರ್ಥಿಯಾಗಿ ಶಿವಾನಂದ ಬೆಂತೂರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ತಹಶೀಲ್ದಾರ್​ ಕಚೇರಿಗೆ ತೆರಳಿದ ಅವರು ಕಾಂಗ್ರೆಸ್​ ಬಂಡಾಯ ಅಭ್ಯರ್ತಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಈ ಕ್ಷೇತ್ರದಿಂದ ಶಾಸಕರಾಗಿ ನಂತರ ಸಚಿವರಾಗಿದ್ದ ಸಿ.ಎಸ್​ ಶಿವಳ್ಳಿಯವರ ನಿಧನಾನಂತರ ಈ ಕ್ಷೇತ್ರ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 19ರಂದು ಉಪಚುನಾವಣೆ ನಡೆಯಲಿದ್ದು ಕಾಂಗ್ರೆಸ್​​ನಿಂದ ದಿವಂಗತ ಸಿ.ಎಸ್​ ಶಿವಳ್ಳಿಯವರ ಪತ್ನಿ ಕುಸುಮಾ ಸ್ಪರ್ಧಿಸುತ್ತಿದ್ದು, ಬಿಜೆಪಿ ಮಾಜಿ ಶಾಸಕ ಎಸ್​​.ಐ.ಚಿಕ್ಕನಗೌಡರ್​ಗೆ ಟಿಕೆಟ್ ನೀಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv