ಸೈನಿಕರಿಗೆ ಅವಮಾನಿಸುವ ಮಾತನಾಡಿಲ್ಲ, ಬಿಜೆಪಿ ನನ್ನ ಹೇಳಿಕೆಯನ್ನ ತಿರುಚಿದೆ: ಸಿಎಂ

ಮಂಡ್ಯ: ಪ್ರಧಾನಿ ಮೋದಿ ಅವರೇ..ಬಡಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿ ಅಂತಾ ನಾನು ಹೇಳಿದ್ದೇನೆಯೇ ಹೊರತು, ನಾನು ಸೈನಿಕರಿಗೆ ಅಪಮಾನ ಮಾಡುವ ಮಾತನಾಡಿಲ್ಲ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇತ್ತೀಚೆಗೆ ಱಲಿಯೊಂದರ ವೇಳೆ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಊಟಕ್ಕೆ ಗತಿಯಿಲ್ಲ, ಕೆಲಸ ಇಲ್ಲ ಅಂತ ಅಂತಿಮವಾಗಿ ಯುವಕರು ಸೈನ್ಯ ಸೇರ್ತಾರೆ ಅಂತಾ ಹೇಳಿರೋ ವಿಡಿಯೋ ವೈರಲ್ ಆಗಿತ್ತು. ಅವರ ಈ ಹೇಳಿಕೆಯನ್ನ ಬಿಜೆಪಿ ಖಂಡಿಸಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಸಿಎಂ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಸಿಎಂ ಹೇಳಿದ್ದೇನು..?ಊಟಕ್ಕೆ ಗತಿಯಿಲ್ಲ, ಕೆಲಸ ಇಲ್ಲ ಅಂತ ಅಂತಿಮವಾಗಿ ಯುವಕರು ಆ ಸೈನ್ಯ ಸೇರ್ತಾರೆ-ಕುಮಾರಸ್ವಾಮಿ

ಈ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಶ್ರೀಮಂತ ಮಕ್ಕಳ್ಯಾರೂ ಸೈನ್ಯಕ್ಕೆ ಸೇರುವುದಿಲ್ಲ. ನಾನು ಉದಾಹರಣೆ ಕೊಟ್ಟಿದ್ದೇ, ಗುರು ಕುಟುಂಬದ ಪರ. ಗುರು ಹುತಾತ್ಮರಾದ ಮೇಲೆ ಅವರ ಕುಟುಂಬದ ಪರಿಸ್ಥಿತಿ ನೋಡಿಯೇ ಹೇಳಿದ್ದು. ನಾನು ಹೇಳಿರೋದ್ರಲ್ಲಿ ಅಸತ್ಯ ಏನೂ ಇಲ್ಲ ಎಂದರು. ಇವತ್ತು ನಾವು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಿಲ್ಲ. ಕೊನೆಗೆ ಸೈನ್ಯಕ್ಕಾದ್ರೂ ಸೇರಿ ಜೀವನ ಮಾಡಿಕೊಳ್ಳೋಣ ಅಂತಾ ಹೋಗುತ್ತಾರೆ. ಇದು ಇರೋ ವಾಸ್ತವ. ನಾನು ಯಾರಿಗೂ ಅವಮಾನ ಮಾಡಿದ್ದಲ್ಲ. ನಾನು ನರೇಂದ್ರ ಮೋದಿಗೆ ಬಡ ಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿ ಅಂತಾ ಹೇಳಿದ್ದೆ. ಯಾವುದೇ ಅಸತ್ಯ ಹೇಳಿಲ್ಲ. ಬಿಜೆಪಿಯವರು ನನ್ನ ಹೇಳಿಕೆಯನ್ನ ತಿರುಚಿದ್ದಾರೆ ಎಂದು ಸಿಎಂ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv