ಸುಮಲತಾಗೆ ಭಯವಿದ್ರೆ ಮೋದಿ ಅಮೆರಿಕಾ ಕಮಾಂಡೋಗಳನ್ನ ಕರೆಸಿ ಭದ್ರತೆ ನೀಡಲಿ: ಸಿಎಂ

ಮಂಡ್ಯ: ‘ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಭಯ ಆಗಿದ್ರೆ ಪ್ರಧಾನಿ ಮೋದಿ ಅಮೆರಿಕಾದ ಕಮಾಂಡೋಗಳನ್ನ ಕರೆಸಿ ಭದ್ರತೆ ಒದಗಿಸಲಿ’ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮೊನ್ನೆಯ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ, ಚುನಾವಣೆಗೆ ಎರಡು ದಿನ ಇರುವಾಗ ಅವರ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ನಮ್ಮ ಮೇಲೆ ಹಾಕಲು ಯತ್ನಿಸ್ತಿದ್ದಾರೆ ಅಂತಾ ಹೇಳಿದ್ದರು. ಸಿಎಂ ಅವ್ರ ಈ ಹೇಳಿಕೆಗೆ ನಿನ್ನೆ ಕೆ.ಆರ್.ಪೇಟೆಯಲ್ಲಿ ಪ್ರತಿಕ್ರಿಯಿಸಿದ್ದ ಸುಮಲತಾ ಅಂಬರೀಶ್​, ಒಬ್ಬ ಮುಖ್ಯಮಂತ್ರಿ ಆದವರು ಹೇಗೆಲ್ಲಾ ಮಾತನಾಡ್ತಿದ್ದಾರೆ. ನಿಜವಾಗಲೂ ಕಲ್ಲು ಹೊಡೆಸಿ ನಮ್ಮ ಮೇಲೆಯೇ ಗೂಬೆ ಕೂರಿಸಲು ಈ ತರಹದ ಹೇಳಿಕೆ ನೀಡಿದ್ದಾರೆ ಅನಿಸುತ್ತದೆ. ಸಿಎಂ ಅವ್ರ ಈ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ ಅಂತಾ ಹೇಳಿದ್ದರು.

ಇದಕ್ಕೆ ಇಂದು ಸಿಎಂ ಪ್ರತಿಕ್ರಿಯಿಸಿ, ಸುಮಲತಾಗೆ ಯಾಕೆ ಭಯ? ಭಯ ಆದರೆ ಸಿಆರ್​ಪಿಎಫ್​ ಯೋಧರು ಒಂದೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷರೊಂದಿಗೆ ಮಾತನಾಡಿ, ಅಲ್ಲಿನ ಕಮಾಂಡೋಗಳನ್ನ ಸುಮಲತಾ ಅವರ ಭದ್ರತೆಗೆ ಒದಗಿಸಲಿ ಅಂತಾ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv