ಮಧು ಸೋತಾಗಲೂ ಪವರ್​​ಫುಲ್ ಅನ್ನೋದಾದ್ರೆ, ಮತ್ತೆ ಮತ್ತೆ ಅವ್ರನ್ನ ಸೋಲಿಸಬೇಕು: ಕುಮಾರ್ ಬಂಗಾರಪ್ಪ

ಶಿವಮೊಗ್ಗ: ಅಂಬರೀಶ್ ಸಾವಿನಲ್ಲೂ ಜೆಡಿಎಸ್ ಪಕ್ಷ ರಾಜಕೀಯ ಮಾಡಿದೆ. ಸಿದ್ದರಾಮಯ್ಯ-ದೇವೇಗೌಡರ ಹಳಸಿರುವ ಸಂಬಂಧಗಳು ವೇದಿಕೆಗೆ ಮಾತ್ರ ಸೀಮಿತ. ಕೆಲ ಪ್ರಚಾರಗಳಲ್ಲಿ ಮಾತ್ರ ಸಿದ್ದರಾಮಯ್ಯ ಕಾಣಿಸಿಕೊಂಡಿದ್ದಾರೆ ಅಂತಾ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಮದಿಗೆ ಮಾತನಾಡಿದ ಅವರು,  ಮಧು ಬಂಗಾರಪ್ಪ ಸೋತಾಗಲೂ ಕ್ಷೇತ್ರಕ್ಕೆ ನೂರಾರು ಕೋಟಿ ತಂದಿದ್ದೇನೆ ಎನ್ನುತ್ತಾರೆ. ಸೋತಾಗಲೂ ಪವರ್ ಫುಲ್.. ಅನ್ನೋದಾದ್ರೆ. ಅವರನ್ನ ಜನರು ಮತ್ತೆ ಮತ್ತೆ ಸೋಲಿಸಬೇಕು ಎಂದು ಸಹೋದರ, ದೋಸ್ತಿ ಅಭ್ಯರ್ಥಿ  ಮಧು ಬಂಗಾರಪ್ಪಗೆ ತಿರುಗೇಟು ನೀಡಿದರು.

ಶರಾವತಿ ಡೆಂಟಲ್ ಕಾಲೇಜು ಲೂಟಿ ಮಾಡಿದ್ದಾರೆ. ಬಗರಹುಕುಂ ಲೆಟರ್ಸ್.. ಫ್ಯಾಮಿಲಿ ಲೂಟರ್ಸ್.. ಹೌಟು ಲೂಟ್ ಅನ್ನೋದು ಗೊತ್ತು ಎಂದು ಲೇವಡಿ ಮಾಡಿದ್ರು . ಇಂಪೋರ್ಟೆಡ್​ ಕ್ಯಾಂಡಿಡೇಟ್​ಗೆ ಏನೂ ಗೊತ್ತಿಲ್ಲ. ಮಂಗನ ಕಾಯಿಲೆ ವಿಚಾರದ ಬಗ್ಗೆ ಮಧು ಬಂಗಾರಪ್ಪಗೆ ಏನೂ ಗೊತ್ತಿಲ್ಲ. ಯಾವುದೋ ಒಂದು ವಿಸಿಟ್ ಮಾಡಿದ್ರೆ ಮುಗೀತಾ..? ಈ ಬಾರಿ ಮಂಗನ ಕಾಯಿಲೆಯನ್ನು ಚುನಾವಣೆ ಅಸ್ತ್ರವಾಗಿ ಬಳಕೆ ಮಾಡ್ತಾ ಇದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಕಿಡಿಕಾರಿದ್ರು.  ಜೆಡಿಎಸ್​ನವರು ಮಾಡಿರುವ ಕೆಲಸಕ್ಕೆ ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ ಜನರು ಉತ್ತರ ನೀಡಲಿದ್ದಾರೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv