ಓವರ್​​ಟೇಕ್ ಮಾಡಲು ಹೋಗಿ ಕೆಎಸ್​ಆರ್​ಟಿಸಿ ಡಿಕ್ಕಿ: ಓರ್ವ ಸಾವು

ತುಮಕೂರು: ಬಸ್​​ ಹಿಂದಿಕ್ಕುವ ಭರದಲ್ಲಿ ಮುಂದೆ ಇರುವ ಕೆಎಸ್​ಆರ್​​ಟಿಸಿ ಬಸ್​ಗೆ ಮತ್ತೊಂದು ಬಸ್​​ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಇನ್ನು 8 ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ನಡೆದಿದೆ.
ಬಾಗಲಕೋಟೆಯಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ಗಳು ತೆರಳುತ್ತಿದ್ದವು. ಮುಂದೆ ಇರುವ ಬಸ್​​ ಹಿಂದಿಕ್ಕುವ ಭರದಲ್ಲಿ ಮತ್ತೊಂದು ಬಸ್​​ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 8 ಮಂದಿ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ ಆಗಿದ್ದು, ನಾಲ್ಕು ಕಿ.ಮೀ. ವರೆಗೂ ಟ್ರಾಫಿಕ್​​ ಜಾಮ್​​ ಆಗಿದೆ. ಪಶ್ಚಿಮ ವಲಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com