KSRTC ಟಿಕೆಟ್​ ಇಲ್ಲದೇ ಪ್ರಯಾಣ: ಅತೀ ಹೆಚ್ಚು ದಂಡ ವಸೂಲಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡಗಳನ್ನು ರಚಿಸಿತ್ತು. ಈ ಬಾರಿ 2019ರ ಮಾರ್ಚ್ ತಿಂಗಳಿನಲ್ಲಿ ಸಂಸ್ಥೆಯು, ಅತೀ ಹೆಚ್ಚು ದಂಡ ವಸೂಲಿ ಮಾಡಿದೆ. ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 40,289 ವಾಹನಗಳನ್ನು ತನಿಖೆಗೊಳಪಡಿಸಿ, 4596 ಪ್ರಕರಣಗಳನ್ನು ಪತ್ತೆಹಚ್ಚಿದೆ. ಅಲ್ಲದೇ  5851 ಟಿಕೆಟ್​ ರಹಿತ ಪ್ರಯಾಣಿಕರಿಂದ  7,52,806 ರೂಪಾಯಿಗಳನ್ನು ದಂಡರೂಪದಲ್ಲಿ ವಸೂಲಿ ಮಾಡಿದೆ. ಇದರಿಂದ ನಿಗಮದ ಆದಾಯದಲ್ಲಿ 1,07,877 ರೂಪಾಯಿ ಸೋರಿಕೆ ಆಗುತ್ತಿತ್ತು ಅನ್ನೋದನ್ನ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗೆಯೇ, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತಿಯ ಶಿಸ್ತು ಕ್ರಮ ಜರುಗಿಸಿದ್ದಾರೆ. ಆದ್ದರಿಂದ ಕೆಎಸ್​ಆರ್​ಟಿಸಿ ನಿಗಮದ ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರು ನಿಗದಿತ ಟಿಕೆಟ್​ ಅಥವಾ ಪಾಸ್​ಗಳನ್ನು ಪಡೆದು ಸಂಚರಿಸುವಂತೆ ಮನವಿ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv