ಸರಕಾರಿ ಬಸ್​ ಇಲ್ಲ, ಖಾಸಗಿ ಬಸ್​ ರೇಟು ದುಪ್ಪಟ್ಟು..! #Election

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ‌ಗೆ ನಾಳೆ ಮತದಾನ ನಡೆಯಲಿದ್ದು, ಈ ಹಿನ್ನೆಲೆ ಇಂದು ಮತ್ತು ನಾಳೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸಾರಿಗೆ ಸಂಸ್ಥೆಗಳು ಮನವಿ ಮಾಡಿವೆ.

ಚುನಾವಣಾ ಕಾರ್ಯ ಹಾಗೂ ಪೊಲೀಸ್ ಭದ್ರತೆಗಾಗಿ ಸಾವಿರಾರು ಬಸ್ಸುಗಳು ನಿಯೋಜನೆಗೊಂಡಿವೆ. ಕೆಎಸ್ಆರ್​ಟಿಸಿಯಿಂದ 4,000 ಬಸ್ಸುಗಳು ಹಾಗೂ ಬಿಎಂಟಿಸಿಯಿಂದ 1,493 ಬಸ್ಸುಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅನೇಕ ಮಾರ್ಗಗಳಲ್ಲಿ ಬಸ್​ ಸೇವೆ ಮೊಟಕುಗೊಳಿಸಲಾಗಿದೆ. ಬಸ್​​ಗಳಿಲ್ಲದೆ ಪ್ರಯಾಣಿಕರು ಪರದಾಡಬೇಕಾಗುತ್ತೆ. ಹೀಗಾಗಿ ಪ್ರಯಾಣಿಕರು ಮೊದಲೇ ಸರಿಯಾಗಿ ಪ್ಲಾನ್ ಮಾಡಿಕೊಂಡು ಹೋಗೋದು ಒಳ್ಳೇದು.

ಇಲ್ಲಿ ಪ್ರಯಾಣಿಕರು ಇನ್ನೂ ಒಂದು ಜಾಗ್ರತೆ ವಹಿಸುವುದು ಅನಿವಾರ್ಯ. ಸರಕಾರಿ ಬಸ್ಸುಗಳು ಚುನಾವಣೆಗೆ ಮೀಸಲಾಗಿವೆ ಎಂಬುದನ್ನು ಅರಿತ ಖಾಸಗಿ ಬಸ್​ ಆಪರೇಟರುಗಳು ಬಸ್​ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸಿದ್ದಾರೆ. ಮಾಮೂಲಿ ಪ್ರಯಾಣ ದರಕ್ಕಿಂತ ಹೆಚ್ಚು ಟಿಕೆಟ್​ ದರ ನಿಗದಿಪಡಿಸಿದ್ದಾರೆ. ಇನ್ನು, ವೋಟು ಹಾಕಲು ಊರಿಗೆ ಹೋಗುವವರಿಗೂ ಬಸ್​ ದರ ಏರಿಕೆ ಬಿಸಿ ತಟ್ಟಿದೆ!

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv