ರೇಷ್ಮೆ ಸೀರೆಗಾಗಿ ನಾರಿಯರ ಕೆಎಸ್​​ಐಸಿ ಮಳಿಗೆಗೆ ಮುತ್ತಿಗೆ..!

ರಾಮನಗರ: ರೇಷ್ಮೆ ಸೀರೆಗಾಗಿ ನಾರಿಯರು ಚನ್ನಪಟ್ಟಣದ ಕೆಎಸ್​ಐಸಿ ಮಳಿಗೆಯ ಮೇಲೆ ಮುತ್ತಿಗೆ ಹಾಕಿದ ಪ್ರಸಂಗ ಇಂದು ನಡೆಯಿತು. ಗೌರಿ ಹಬ್ಬದ ಪ್ರಯುಕ್ತ ಆಯಾ ಜಿಲ್ಲೆಗಳ ಕೆಎಸ್​​ಐಸಿಯಲ್ಲಿ ಎರಡು ದಿನವೂ ರಿಯಾಯಿತಿ ದರದಲ್ಲಿ ಸೀರೆ ಮಾರಾಟವಿದೆ ಎಂದು ಜಾಹಿರಾತು ನೀಡಲಾಗಿತ್ತು. ಆದರೆ, ಇಲ್ಲಿ ಟೋಕನ್​ ಪಡೆವವರಿಗೆ ಮಾತ್ರ ಸೀರೆ ನೀಡಲಾಗುತ್ತಿದೆ. ಮಳಿಗೆಗೆ ಬಂದಿರೋ ಎಲ್ಲಾ ಮಹಿಳೆಯರಿಗೆ ಸೀರೆ ಮಾರಾಟ ಮಾಡಬೇಕೆಂದು ಮಹಿಳೆಯರು ಒತ್ತಾಯಿಸಿ ಮಳಿಗೆಯೊಳಗೆ ನುಗ್ಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ಮಹಿಳೆಯರು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಮಹಿಳೆಯರು ಸೀರೆ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv