​‘ಚಂದ್ರಶೇಖರ್ ಬಿಜೆಪಿಗೆ​ ಯಾಕೆ ಬಂದ್ರು.. ಹೋದ್ರು ಅನ್ನೋದನ್ನ ಅವರನ್ನೆ ಕೇಳಬೇಕು’

ಶಿವಮೊಗ್ಗ: ರಾಮನಗರ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್.​ಚಂದ್ರಶೇಖರ್ ಬಿಜೆಪಿಗೆ​ ಯಾಕೆ ಬಂದ್ರು.. ಯಾಕೆ ಹೋದರು ಅನ್ನೋದನ್ನ ಅವರನ್ನ ಕೇಳಬೇಕು. ಬಿಜೆಪಿಗೆ ಇದೊಂದು ಪಾಠ. ನಮ್ಮ ಪಕ್ಷವನ್ನ ಆ ಭಾಗದಲ್ಲಿ ಬಲ ಪಡಿಸಬೇಕು ಎಂದು ಶಾಸಕ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಭಾಗದಲ್ಲಿ ನಮ್ಮ ಪಕ್ಷ ಸಂಘಟನೆಯನ್ನ ಬಲ ಪಡಿಸಬೇಕು. ಅಲ್ಲಿ ನಮ್ಮ ನಾಯಕರನ್ನು ಬಲ ಪಡಿಸಬೇಕು. ಪಕ್ಷದ ಅಭ್ಯರ್ಥಿಯಾಗಿ ಅವರು ಟಿಕೆಟ್ ಕೇಳಿದ್ದಕ್ಕೆ ಕೊಟ್ಟಿದ್ರು. ಅವರು ಇಲ್ಲ ಸಲ್ಲದ ಆರೋಪ ಮಾಡೋದು ಸರಿಯಲ್ಲ. ಇಂತಹವರ ಮೇಲೆ ನನಗೆ ನಂಬಿಕೆ ಇಲ್ಲ. ಉಪ ಚುನಾವಣೆ ಮೇಲೆ ಇದು ಪರಿಣಾಮ ಬೀರೋದಿಲ್ಲ. ಜೆಡಿಎಸ್- ಕಾಂಗ್ರೆಸ್ ನವರ ಕೈವಾಡವಿದ್ರೆ ಜನರಿಗೆ ಗೊತ್ತಾಗುತ್ತೆ. ಇದು ಅವರು ಪಕ್ಷಕ್ಕೆ ಮಾಡಿದಂತಹ ದ್ರೋಹ. ಟಿಕೆಟ್ ಕೊಡಬೇಕಾದ್ರೆ ಮುಂದೆ ಯೋಚನೆ ಮಾಡ್ತೀವಿ . ಎರಡು ದಿನದಲ್ಲಿ ಈ ಪ್ರಕರಣದ ಸತ್ಯಾಂಶ ಹೊರ ಬರುತ್ತೆ. ಚಂದ್ರಶೇಖರ್ ಅವರ ನಡವಳಿಕೆ ಬಹಳ ಆಶ್ಚರ್ಯ ಉಂಟು ಮಾಡಿದೆ ಎಂದು ಈಶ್ವರಪ್ಪ ತಮ್ಮ ಬೇಸರ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv