ಆಡಿಯೋದಿಂದ ಸ್ಪೀಕರ್​​ಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ನೋವಾಗಿದೆ: ಕೆ.ಎಸ್​.ಈಶ್ವರಪ್ಪ

ಬೆಂಗಳೂರು: ಆಪರೇಷನ್ ಕಮಲದ ವಿಚಾರದಲ್ಲಿ ಸ್ಪೀಕರ್ ರಮೇಶ್​ ಕುಮಾರ್ ಹೆಸರು ಕೇಳಿ ಬಂದಿದೆ. ಇದು ಕೇವಲ ಅವರೊಬ್ಬರ ನೋವು ಮಾತ್ರವಲ್ಲ, ಇಡೀ ರಾಜ್ಯಕ್ಕೇ ಆಗಿರುವ ನೋವು ಅಂತಾ ಶಾಸಕ ಕೆ.ಎಸ್​.ಈಶ್ವರಪ್ಪ ಹೇಳಿದರು. ಸದನದ ಚರ್ಚೆಯಲ್ಲಿ ಸ್ಪೀಕರ್ ರಮೇಶ್​ ಕುಮಾರ್ ಮಾತನಾಡಿ, ಈ ವಿವಾದವನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ. ಇಡೀ ದೇಶ ನಮ್ಮ ಕಡೆ ನೋಡುತ್ತಿದೆ. ಇದು ಸೂಕ್ತ ತನಿಖೆ ಆಗಬೇಕು ಅಂದ್ರು. ನಂತರ ಈಶ್ವರಪ್ಪಗೆ ಮಾತನಾಡಲು ಸ್ಪೀಕರ್ ಅವಕಾಶ ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಕೆ.ಎಸ್​.ಈಶ್ವರಪ್ಪ, ಸ್ಪೀಕರ್​ ಸ್ಥಾನಕ್ಕೆ ಅವಮಾನವಾದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಪ್ರಜಾಸತಾತ್ಮಕ ವ್ಯವಸ್ಥೆಗೆ ಗಂಡಾಂತರ. ವೈಯಕ್ತಿಕವಾಗಿ ಕೇವಲ ಇದು ನಿಮ್ಮ ನೋವಲ್ಲ. ಇಡೀ ರಾಜ್ಯಕ್ಕೆ , ಸದನಕ್ಕೆ ಆದ ನೋವು. ಮೊದಲು ಆಡಿಯೋ ಫೇಕ್​ ಆಗಿದೆಯೋ? ಸತ್ಯನೋ ಅನ್ನೋದು ತೀರ್ಮಾನ ಆಗಲಿ. ನಂತರ ಮಾತನಾಡಿದ ಧ್ವನಿ ಯಾರದ್ದು ಎಂಬುದು ತನಿಖೆಯಾಗಲಿ. ನಿಮ್ಮ ಎಲ್ಲಾ ನಿರ್ಧಾರಕ್ಕೂ ನಾವು ನಿಮ್ಮ ಜೊತೆ ಇದ್ದೇವೆ. ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮುಂದೆಂದೂ ಆಗಕೂಡದು. ಸೂಕ್ತ ತನಿಖೆ ನಡೆಯಲಿ ಅಂತಾ ಆಗ್ರಹಿಸಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv