ಎಲೆಕ್ಷನ್ ಮುಗಿದ್ಮೇಲೆ ನಿಖಿಲ್ ಎಲ್ಲಿದ್ಯಪ್ಪಾ? ಬದಲಾಗಿ ಕುಮಾರಣ್ಣ ಎಲ್ಲಿದ್ಯಣ್ಣೋ ಆಗುತ್ತೆ: ಈಶ್ವರಪ್ಪ

ಗದಗ: ಲೋಕಸಭಾ ಚುನಾವಣೆ ನಂತರ ನಿಖಿಲ್ ಎಲ್ಲಿದ್ಯಪ್ಪಾ? ಅನ್ನೊ ಬದಲಾಗಿ ಕುಮಾರಣ್ಣ ಎಲ್ಲಿದ್ಯಣ್ಣೋ? ಅನ್ನೋ ಹಾಗೆ ಆಗುತ್ತೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಹೆಚ್.ಕೆ ಪಾಟೀಲ್, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲಿ ಇರುತ್ತಾರೋ ಗೊತ್ತಿಲ್ಲ. ಭೂತಗನ್ನಡಿ ಹಿಡಿದುಕೊಂಡು ಹುಡುಕಬೇಕು ಅಂತಾ ಲೇವಡಿ ಮಾಡಿದರು. ಈ ಬಾರಿ ಬಿಜೆಪಿ ಎರಡಂಕಿ ದಾಟಲ್ಲ ಅಂತಾರೆ. ಎರಡಂಕಿ ದಾಟದಿದ್ರೆ ರಾಜಕೀಯದಿಂದ ದೂರ ಉಳಿಯುವೆ. ಬಿಜೆಪಿ ಕೋಮವಾದಿ ಅಂತಾರೆ, ಆದ್ರೆ ಕಾಂಗ್ರೆಸ್ ಲಿಂಗಾಯತ-ವೀರಶೈವ ಧರ್ಮ ಒಡೆಯುವ ಕೆಲಸ ಮಾಡಿದ್ರು. ಆದ್ರೆ ನಾವು ಜಾತಿ ಮಾಡಲ್ಲ, ಎಲ್ಲಾ ವರ್ಗದವರನ್ನೂ ಬಿಜೆಪಿ ದೊಡ್ಡ ಸ್ಥಾನಕ್ಕೆ ಕೂರಿಸಿದೆ ಎಂದು ಈಶ್ವರಪ್ಪ ಹೇಳಿದರು.

ಚುನಾವಣೆಯಲ್ಲಿ ಸೋಲು-ಗೇಲುವೇ ರಾಜಕಾರಣ. ಕುಮಾರಸ್ವಾಮಿ ನಿಮ್ಮ ಮಗನನ್ನು ಖಂಡಿತಾ ಸೊಲಿಸ್ತೀವಿ ಬಿಡೋದಿಲ್ಲ. ತಂತ್ರಗಾರಿಕೆ ಅಲ್ಲ ರಾಜಕೀಯ ಮಾಡುತ್ತೀವಿ, ಗೆದ್ದೇ ಗೆಲ್ಲುತ್ತೇವೆ ಅಂತಾ ಟಾಂಗ್ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.t Twitter: firstnews.tv