ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುತ್ತಾರೆ: ಕೆಎಸ್ ಈಶ್ವರಪ್ಪ !

ಹುಬ್ಬಳ್ಳಿ: ರಾಜ್ಯದಲ್ಲಿ ಬಜೆಪಿಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿಯಾಗಿದೆ.  ಸಣ್ಣಪುಟ್ಟ ಗೊಂದಲಗಳು ಇವೆ, ಅವುಗಳನ್ನು ನಾವೇ ಸರಿಪಡಿಸಿಕೊಳ್ಳುತ್ತೆವೆ. ಕಾಂಗ್ರೆಸ್ – ಜೆಡಿಎಸ್ ಪರಿಸ್ಥಿತಿ ನೋಡಿದರೆ ನಗು ಬರುತ್ತೆ. ಅನೇಕ ಕ್ಷೇತ್ರಗಳಲ್ಲಿ ಅವರ ಮೈತ್ರಿ ಪಕ್ಷದ ಅಭ್ಯರ್ಥಿ ಫೈನಲ್ ಆಗಿಲ್ಲ. ಇನ್ನೂ ಮೈತ್ರಿ ಪಕ್ಷದ ನಾಯಕರು ಮೈಸೂರಿನಲ್ಲಿ ಕರೆದ ಸಭೆಗೆ ಅವರ ಮೈತ್ರಿ ಪಕ್ಷದ ನಾಯಕರು ಹೋಗಿಲ್ಲ. ಆದ್ರು ನಾವು ಮೈತ್ರಿಯಾಗಿ ಚುನಾವಣೆ ಎದುರಿಸುತ್ತೆವೆ ಎನ್ನುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ಮೈತ್ರಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಇವರು, ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ಜೆಡಿಎಸ್‌ನ ಜಿ ಟಿ ದೇವೆಗೌಡ ಹಾಗೂ ಸ.ರಾ ಮಹೇಶ ಹೋಗಿಲ್ಲ. ಮೈತ್ರಿಯಲ್ಲಿ ಸ್ವಲ್ಪ ಸಮಸ್ಯೆ ಇದೆ ನಿಧಾನವಾಗಿ ಒಂದಾಗುತ್ತೆವೆ ಅಂತ ಸಿದ್ದರಾಮಯ್ಯನವರು ಹೇಳುತ್ತಾರೆ. ಬಹುಶಃ ಅವರು ಚುನಾವಣೆ ಬಳಿಕ ಒಂದಾಗಬಹುದು. ತುಮಕೂರಿನಲ್ಲಿ ದೇವೆಗೌಡರನ್ನು ಸೋಲಿಸಲು ಕಾಂಗ್ರೆಸ್‌ನವರು ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಆಂತರಿಕವಾಗಿ ಒಂದಾಗಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಅದೂ ಗೋತ್ತಾಗುತ್ತೆ. ರಾಜ್ಯದಲ್ಲಿ ಎರಡು ಪಕ್ಷಗಳು ನಿರ್ನಾಮ ಆಗುತ್ತೆ. ಬಿಜೆಪಿ ಅತೀ  ಹೆಚ್ಚು ಸ್ಥಾನ ಅಂದರೆ 22 ರಿಂದ 23 ಸ್ಥಾನ ಗೆಲ್ಲುತ್ತೆ. ಈಗ ಪೋಟೋ ಮಾತ್ರ ಇಲ್ಲ.  ಬರುವ ದಿನಗಳಲ್ಲಿ ಸಿದ್ದರಾಮಯ್ಯನವರೇ ಘಟಬಂಧನದಲ್ಲಿ ಇರುವುದಿಲ್ಲ. ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಘಟಬಂಧನ ಉಳಿಯುವದಿಲ್ಲ.  ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುತ್ತಾರೆ. ಚಿಕ್ಕೋಡಿ ಯಲ್ಲಿಬುಂಟಾಗಿರುವ ಸಮಸ್ಯೆಯನ್ನು ಹಿರಿಯರು ಸರಿಪಡಿಸುತ್ತಾರೆ. ಎಂದು ಹುಬ್ಬಳ್ಳಿಯಲ್ಲಿ ಬಜೆಪಿ ಶಾಸಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv