ಸಾಂಸ್ಕೃತಿಕ ನಗರಿಯಲ್ಲಿ ಕೆ.ಎಸ್ ಈಶ್ಚರಪ್ಪ 70ನೇ ಜನ್ಮದಿನಾಚರಣೆ ಸಂಭ್ರಮ

ಮೈಸೂರು: ಇಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ 70ನೇ ಜನ್ಮ ದಿನಾಚರಣೆ ಆಚರಿಸಲಾಯಿತು.  ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಈಶ್ವರಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂಜನಗೂಡು ದತ್ತಾತ್ರೇಯ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಮಾಡಿಸಲಾಯಿತು. ಗುರೂಜೀ ದ್ವಾರಕನಾಥ ಅವರು ಚಂಡಿಕಾ ಯಾಗ, ಹೋಮ ಹವನ ಮಾಡಿಸಿ, ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನು ಸ್ಥಳೀಯರು ಕೇಕ್​ ಕಟ್​ ಮಾಡಿಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

65 ಬಸ್​ಗಳಲ್ಲಿ ಆಗಮಿಸಿದ ಅಭಿಮಾನಿಗಳು
ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಿಂದ ಸುಮಾರು 65 ಕ್ಕೂ ಹೆಚ್ಚು ಬಸ್​ಗಳಲ್ಲಿ ಅಭಿಮಾನಿಗಳು ಮೈಸೂರಿಗೆ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಕೆ.ಎಸ್​. ಈಶ್ವರಪ್ಪ, ಇದಾದ ಬಳಿಕ ಚಾಮುಂಡೇಶ್ವರಿ ದರ್ಶನ, ಬಳಿಕ ಶ್ರೀರಂಗಪಟ್ಟಣದ ರಂಗನಾಥ ದರ್ಶನ ಪಡೆಯೋದಾಗಿ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv