ಸರಸ್ವತಿ ಪೂಜೆಯಲ್ಲಿದ್ದ ತೃಣಮೂಲ ಕಾಂಗ್ರೆಸ್​​ ಶಾಸಕ ಸತ್ಯಜಿತ್ ಹತ್ಯೆ

 ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಯಕತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​​ ಪಕ್ಷದ ಶಾಸಕ ಸತ್ಯಜಿತ್​ ಬಿಸ್ವಾಸ್​​ರನ್ನು ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಶಾಸಕ ಸತ್ಯಜಿತ್​, ನಾಡಿಯಾ ಜಿಲ್ಲೆಯ ಕೃಷ್ಣಗಂಜ್​ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಇಂದು ರಾತ್ರಿ ಸತ್ಯಜಿತ್​ ಬಿಸ್ವಾಸ್​​ರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಎರಡು ಬಾರಿ ಶಾಸಕರಾಗಿದ್ದ ಸತ್ಯಜಿತ್​ ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.