‘ರಾಮ್​ದಾಸ್​​ ಹಿಟ್ ಅಂಡ್ ರನ್ ಆರೋಪ, ದಾಖಲೆ ಕೊಡಲಿ’

ಬೆಂಗಳೂರು: ಇಂದಿರಾ ಕ್ಯಾಂಟೀನ್​​ನಿಂದ ಐಸಿಸಿಗೆ ಕಿಕ್​​​​​ಬ್ಯಾಕ್ ಆರೋಪಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವ್ಯವಹಾರದ ಕುರಿತು ಇಂದು ವಿಧಾನಸಭೆಯಲ್ಲಿ ಮತ್ತೆ ರಾಮದಾಸ್ ಪ್ರಸ್ತಾಪ ಮಾಡಿದ್ರು. ಅಕ್ರಮದ ಬಗ್ಗೆ ನಿನ್ನೆಯೂ ರಾಮದಾಸ್ ಪ್ರಸ್ತಾಪಿಸಿದ್ದು, ಇಂದು ಎಐಸಿಸಿಗೆ ಕಿಕ್ ಬ್ಯಾಕ್ ಆರೋಪಕ್ಕೆ ಸದನದಲ್ಲಿ ಸ್ಪೀಕರ್ ನಿರಾಕರಣೆ ಮಾಡಿದ್ರು. ಹಿಟ್ ಅಂಡ್ ರನ್ ಆರೋಪಗಳನ್ನು ಸದನದಲ್ಲಿ ಮಾಡಬಾರದು ಎಂದು ರಾಮದಾಸ್​ಗೆ ಸ್ಪೀಕರ್ ರಮೇಶ್​​ ಕುಮಾರ್​​ ಸೂಚನೆ ನೀಡಿದ್ರು.

ಈ ವೇಳೆ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ರಾಮದಾಸ್ ಅವರು ಹಿಟ್ ಅಂಡ್ ರನ್ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳನ್ನು ರಾಮದಾಸ್ ಒದಗಿಸಲಿ. ದಾಖಲೆ ಇಟ್ಟು ರಾಮದಾಸ್ ಆರೋಪ ಮಾಡಲಿ. ದಾಖಲೆ ತೋರಿಸಿದರೆ ನಾವೂ ಕೂಡಾ ಚರ್ಚೆ ನಡೆಸಲು ಸಿದ್ಧ ಎಂದರು.