ಮೈದುಂಬಿ ಹರಿಯುತ್ತಿದೆ ಕೃಷ್ಣಾ, ಜಮಖಂಡಿ ಭಾಗಕ್ಕೆ ಪ್ರವಾಹ ಭೀತಿ

ಬಾಗಲಕೋಟೆ: ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ರೆ, ಇತ್ತ ಹಿಪ್ಪರಗಿ ಬ್ಯಾರೆಜ್​ನ​ ಸುತ್ತಮುತ್ತ ಇರುವ ಗ್ರಾಮಸ್ಥರು ಪರದಾಡುವಂತಾಗಿದೆ. ಅಲ್ಲದೇ ಜಮಖಂಡಿ ಭಾಗದ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ಭರ್ತಿಯಾಗಿ 55 ಸಾವಿರ ಕ್ಯೂಸೆಕ್ಸ್​ ಒಳ ಮತ್ತು ಹೊರ ಹರಿವು ಹೊಂದಿದೆ. ಹಾಗಾಗಿ ಮುತ್ತೂರು-ಮೈಗೂರು, ಕಂಕನವಾಡಿ, ಶೂರ್ಪಾಲಿ ಗ್ರಾಮಸ್ಥರು ಕೃಷಿ, ಕೂಲಿ, ಸಂತೆ ಮತ್ತು ಜಾನುವಾರು ಮೇವು ಸಾಗಾಟಕ್ಕೂ ಬೋಟ್​ ಅವಲಂಬಿಸಿದ್ದಾರೆ. ವಿಪರ್ಯಾಸವೆಂದರೆ ಸುರಕ್ಷತಾ ಪರಿಕರಗಳಿಲ್ಲದೆ ಜನರು ಜೀವ ಕೈಯಲ್ಲಿ ಹಿಡಿದು ಬೋಟ್​ನಲ್ಲಿ ಪ್ರಯಾಣಿಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv