ರಾಜ್ಯದ ಯಾವುದೇ ಶಾಸಕರೂ ಯೋಗ್ಯರಲ್ಲ : ರವಿ ಕೃಷ್ಣಾ ರೆಡ್ಡಿ

ಹುಬ್ಬಳ್ಳಿ- ರಾಜ್ಯದಲ್ಲಿ ಜೆಸಿಬಿ ರಾಜಕೀಯ ಪಕ್ಷಗಳು ಭ್ರಷ್ಟಾಚಾರ, ಕುಟುಂಬದ ರಾಜಕಾರಣ ಮಾಡುತ್ತಿವೆ. ಇದರಿಂದಾಗಿ ದೇಶ ಹಾಗೂ ರಾಜ್ಯ ರಾಜಕಾರಣ ವ್ಯವಸ್ಥೆಯನ್ನು ಈ ಮೂರು ಪಕ್ಷಗಳು ಹಾಳು ಮಾಡುವೆ ಎಂದು ನೂತನ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಈಗ ಇರುವ ಶಾಸಕರು, ಸಚಿವರು ಅಯೋಗ್ಯರು ಹಾಗೂ ಅನರ್ಹರಾಗಿದ್ದಾರೆ, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕೀಯ ಪಕ್ಷಗಳು ರಾಜ್ಯದ ವ್ಯವಸ್ಥೆ ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟವೆ. ತಮ್ಮ ವೈಯಕ್ತಿಕ ಹಾಗೂ ಕುಟುಂಬ ಹಿತಾಸಕ್ತಿಗೆ ಅಧಿಕಾರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ರಾಜ್ಯ ಸರ್ಕಾರ ಎರಡು ಲಕ್ಷ ನಲವತ್ತು ಮೂರು ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಕ್ಕೆ ಬಜೆಟ್ ಹೆಚ್ಚಿಗೆ ಮಾಡುವುದರಿಂದ ಲಾಭ ಬರುತ್ತಿದೆ, ಬಜೆಟ್ ವಿಂಗಡನೆ ಮಾಡಿದ್ದರೆ ಒಂದು ತಾಲೂಕಿಗೆ ಒಂದುಸಾವಿರ ಕೋಟಿ ಬರುತ್ತೆ, ಆದ್ರೆ ಅದನ್ನು ಬಳಕೆ ಬಗ್ಗೆ ಚರ್ಚೆ ಮಾಡದೆ ಶಾಸನ ಸಭೆಯಲ್ಲಿ ಯಾವ ರೀತಿಯಾಗಿ ವರ್ತನೆ ಮಾಡಿದರು ಅನ್ನುವುದು ನೋಡಲಾಯಿತು ಎಂದು ಹರಿಹಾಯ್ದರು.

ಇನ್ನು ಇದೇ ವೇಲೆ ಮಾತನಾಡಿದ ಇವರು, ನಿರುದ್ಯೋಗ ವ್ಯವಸ್ಥೆ ನಿಯಂತ್ರಣಕ್ಕೆ ತರಲು ಜೆಸಿಬಿ ರಾಜಕೀಯ ಪಕ್ಷಗಳು ವಿಫಲವಾಗಿತ್ತಿವೆ, ಒಂದು ಎಸ್ ಡಿ ಎ ಹಾಗೂ ಎಫ್ ಡಿಎ 4.500 ಹುದ್ದೆಗಳಿಗೆ 13.5ಲಕ್ಷ ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 700 ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ 10.5 ಲಕ್ಷ ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಕಾರಣ ಜೆಸಿಬಿ ರಾಜಕೀಯ ಪಕ್ಷಗಳಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಕೀಡಿಕಾರಿದರು. ರಾಜ್ಯದ ರೈತರ ಸಾಲ‌ಮನ್ನಾ 50 ಸಾವಿರ ಕೋಟ ಸಾಲ ಮನ್ನಾ ಮಾಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಬೊಬ್ಬೆ ಹೊಡೆದಿದ್ದಾರೆ. ಆದರೆ ಇನ್ನೂ ಕೂಡ ಒಂದು ಸಾವಿರ ಕೋಟಿ ಸಾಲ ಮನ್ನಾ ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯವೇ ಬೆಚ್ಚಿಬೇರಗಾದ ಬಂಡಿಪುರ ಅಭಯಾರಣ್ಯ ಅಗ್ನಿ ಅವಘಡದ ಬಗ್ಗೆ ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶದ ನಂತರದಲ್ಲಿ ಒಂದು ಹೆಲಿಕ್ಯಾಪ್ಟರ್ ಕಳಿಸಿದ್ದಾರೆ ಎಂದು ಅವರು ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಎಲ್ಲ ವ್ಯವಸ್ಥೆಯನ್ನು ಬದಿಗಿಟ್ಟು ಸಾರ್ವಜನಿಕರಿಗೆ ಉತ್ತಮ ರಾಜಕೀಯ ಸೇವೆ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ರಂಗ ಪಕ್ಷವಮ್ನು ಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ರಂಗದಿಂದ ರಾಜ್ಯದ 28 ಕ್ಷೇತ್ರದಲ್ಲಿ ಸ್ಪರ್ಧಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ವಿಕಾಸ ಸೊಪ್ಪಿನ ಹಾಗೂ ಶೈಲೇಂದ್ರ ಪಾಟೀಲ ಸಂಭವನಿಯ ಆಭ್ಯರ್ಥಿಗಳಾಗಿದ್ದಾರೆ. ಅಲ್ಲದೇ ದಾವಣಗೆರೆ, ಬೆಳಗಾವಿ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv