ಎಂ.ಬಿ. ಪಾಟೀಲ್​​ ಬರೆದಿದ್ದಾರೆ ಎನ್ನಲಾದ ಲೇಟರ್​ ಫೇಕ್​​​, ಟ್ವಿಟರ್​​ಗೂ ದೂರು ನೀಡಿದ ಕಾಂಗ್ರೆಸ್​​​

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಎಂ.ಬಿ. ಪಾಟೀಲ್​​ ಬರೆದ ಪತ್ರವನ್ನ ರಾಜ್ಯ ಬಿಜೆಪಿ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ರಾಜ್ಯ ಕಾಂಗ್ರೆಸ್, ಸೋಲಿನ ಭೀತಿಯಿಂದ ವಿಚಲಿತರಾಗಿರುವ ಬಿಜೆಪಿ, ಸುಳ್ಳು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ದುರುದ್ದೇಶದಿಂದ ಬಿಜೆಪಿಯ ಕಪಟ ತಂತ್ರಗಾರಿಕೆಯ ವಿಭಾಗ ಸೃಷ್ಟಿಸಿರುವ ನಕಲಿ ಪತ್ರ ಇದಾಗಿದ್ದು , ಹಾಗೂ ತಕ್ಷಣವೇ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮನವಿ ಮಾಡಿಕೊಂಡಿದೆ.

ಅಲ್ಲದೇ ಮತ್ತೊಂದು ಟ್ವಿಟರ್​ ಸಂಸ್ಥೆಯನ್ನ ಟ್ಯಾಗ್ ಮಾಡಿ ಮತ್ತೊಂದು ಟ್ವೀಟ್​ ಮಾಡಿರೋ ಕರ್ನಾಟಕ ಕಾಂಗ್ರೆಸ್, ಬಿಜೆಪಿಯ ವೆರಿಫೈಡ್​ ಅಕೌಂಟ್​​ ಫೇಕ್​ ನ್ಯೂಸ್​ ಹರಡುತ್ತಿದೆ. ಇದು ಟ್ವಿಟರ್​​ನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ಬಗ್ಗೆ ಟ್ವಿಟರ್​ ಕ್ರಮ ಕೈಗೊಳ್ಳ ಬೇಕು ಅಂತಾ ಆಗ್ರಹಿಸಿದೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv